ಬ್ಯಾಡ್ಮಿಂಟನ್‌ ಮಹಿಳಾ ತಂಡದ ಕೋಚ್‌ ರಾಜೀನಾಮೆ ನವದೆಹಲಿ (ಪಿಟಿಐ): ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ಮಹಿಳಾ ಬ್ಯಾಡ್ಮಿಂಟನ್‌ ತಂಡದ ಕೋಚ್‌ ದಕ್ಷಿಣ ಕೊರಿಯಾದ ಕಿಮ್‌ ಜಿ ಹ್ಯುನ್‌ ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಈ ಬಗ್ಗೆ ಹ್ಯುನ್‌ ಅವರಿಂದ ಅಧಿಕಾರ ಸಂದೇಶ ಬಂದಿಲ್ಲ ಎಂದು ಭಾರತ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಎಐ) ಹೇಳಿದೆ. ಬೂಸಾನ್‌ನ 45 ವರ್ಷದ ಹ್ಯುನ್‌ ಕಳೆದ ತಿಂಗಳು ಬಾಸೆಲ್‌ನಲ್ಲಿ ಸಿಂಧು ಸ್ವರ್ಣ ಗೆದ್ದಾಗ ತಂಡದ ಜೊತೆಯಿದ್ದರು. ಬಿಎಐ ಈ ವರ್ಷದ ಆರಂಭದಲ್ಲಿ ಅವರನ್ನು ಕೋಚ್‌ ಆಗಿ ನೇಮಕ ಮಾಡಿತ್ತು. ಹ್ಯುನ್ ಪತಿ ರಿಚಿ ಮರ್‌ ಅವರು ನ್ಯೂಜಿಲೆಂಡ್‌ನಲ್ಲಿದ್ದಾರೆ. ಕೆಲದಿನಗಳ ಹಿಂದೆ ಧನುರ್ವಾತಕ್ಕೆ ಈಡಾದ ಪತಿಯ ಆರೈಕೆಗಾಗಿ ಅವರು ಅಲ್ಲಿಗೆ ಧಾವಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.