ಡೆಲ್ಲಿ ಹಾಫ್ ಮ್ಯಾರಥಾನ್‌ಗೆ ಬೆಲಿಹು ಲಭ್ಯ ನವದೆಹಲಿ: ಇಥಿಯೋಪಿಯಾದ ಅಂಡಮ್‌ಲಾಕ್ ಬೆಲಿಹು ಮತ್ತು ಸೆಹೆ ಗೆಮೆಚು ಅಕ್ಟೋಬರ್ 20ರಂದು ನಡೆಯಲಿರುವ ಡೆಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವರು. ಕಳೆದ ಬಾರಿ ಇವರಿಬ್ಬರು ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದಿದ್ದರು. ಕಳೆದ ಬಾರಿ ನಡೆದಿದ್ದ ಗೋಲ್ಡ್ ಲೇಬಲ್ ರೋಡ್ ರೇಸ್‌ನಲ್ಲಿ 59:18 ನಿಮಿಷಗಳಲ್ಲಿ ಗುರಿ ಮುಟ್ಟಿ ಪ್ರಶಸ್ತಿ ಗೆದ್ದಿದ್ದ ಬೆಲಿಹು ಸ್ವಲ್ಪದರಲ್ಲೇ ದಾಖಲೆ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದರು. 2014ರಲ್ಲಿ ಗುಯೆ ಅಡೋಲ 59:06 ನಿಮಿಷಗಳಲ್ಲಿ ಗುರಿ ಮುಟ್ಟಿ ದಾಖಲೆ ನಿರ್ಮಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.