ಚೆಸ್‌: ತೇಜ್‌ಕುಮಾರ್‌ಗೆ ಪ್ರಶಸ್ತಿ ಬೆಂಗಳೂರು: ಕರ್ನಾಟಕದ ಗ್ರ್ಯಾಂಡ್‌ ಮಾಸ್ಟರ್‌ ಎಂ.ಎಸ್‌.ತೇಜ್‌ಕುಮಾರ್‌ ಅವರು ಮಂಗಳವಾರ ಇಲ್ಲಿ ಮುಕ್ತಾಯವಾದ 13ನೇ ಬಿಆರ್‌ಡಿಸಿಎ ಇಂಟರ್‌ ನ್ಯಾಷನಲ್‌ ಓಪನ್‌ ಫಿಡೆ ಚೆಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ತೇಜ್‌ಕುಮಾರ್‌, ಎನ್‌.ಲೋಕೇಶ್‌, ಪಿ.ಫೂಬಾಲನ್‌ ಮತ್ತು ಕೆ.ಗುಣಶೇಖರನ್‌ ಅವರು ತಲಾ 8.5 ಪಾಯಿಂಟ್ಸ್‌ ಗಳಿಸಿದ್ದರು. ಉತ್ತಮ ಟೈಬ್ರೇಕರ್‌ ಸ್ಕೋರ್‌ ಹೊಂದಿದ್ದ ಕಾರಣ ಮೈಸೂರಿನ ತೇಜ್‌ಕುಮಾರ್‌ಗೆ ಪ್ರಶಸ್ತಿ ಒಲಿಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.