ಹಾಸನ, ಬಿಎಮ್‌ಎಸ್‌ಸಿಡಬ್ಲ್ಯು ಚಾಂಪಿಯನ್‌ ಬೆಂಗಳೂರು: ಉತ್ತಮ ಆಟವಾಡಿದ ಹಾಸನ ಜಿಲ್ಲಾ ಹಾಗೂಬಿಎಮ್‌ಎಸ್‌ ಮಹಿಳಾ ಕಾಲೇಜು (ಬಿಎಮ್‌ಎಸ್‌ಸಿಡಬ್ಲ್ಯು)ತಂಡಗಳು ರಾಜ್ಯಮಟ್ಟದ ಮೂರನೇ ನೆಟ್‌ಬಾಲ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರವಿಭಾಗದ ಪ್ರಶಸ್ತಿ ಜಯಿಸಿವೆ. ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಬಿಎಮ್‌ಎಸ್‌ಸಿಡಬ್ಲ್ಯು ತಂಡವು ಎಸ್‌ಎವಿಎಮ್ ತಂಡವನ್ನು 18–16ರಿಂದ ಸೋಲಿಸಿ ಟ್ರೋಫಿ ಗೆದ್ದಿತು. ಸೆಮಿಫೈನಲ್‌ ಹಣಾಹಣಿಯಲ್ಲಿಬಿಎಮ್‌ಎಸ್‌ಸಿಡಬ್ಲ್ಯು ತಂಡವು ಅರವಿಂದೊ ಸ್ಪೋರ್ಟ್ಸ್ ಕ್ಲಬ್‌ ತಂಡವನ್ನು 21–18ರಿಂದ ಮತ್ತು ಎಸ್‌ಎವಿಎಮ್‌ ತಂಡವು ಮೈಸೂರು ಜಿಲ್ಲಾ ತಂಡವನ್ನು 19–15ರಿಂದ ಮಣಿಸಿದ್ದವು. ಅರವಿಂದೊ ಸ್ಪೋರ್ಟ್ಸ್ ಕ್ಲಬ್‌ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದ ಅಂತಿಮ ಪಂದ್ಯದಲ್ಲಿ ಹಾಸನ ಜಿಲ್ಲಾ ತಂಡವು ಮೈಸೂರು ಜಿಲ್ಲಾ ತಂಡವನ್ನು 17–13ರಿಂದ ಸೋಲಿಸಿತು. ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಹಾಸನ ತಂಡ ಈಗಲ್‌ ಸ್ಪೋರ್ಟ್ಸ್ ಅಕಾಡೆಮಿ ವಿರುದ್ಧ 19–16ರಿಂದಲೂ, ಮೈಸೂರು ಜಿಲ್ಲಾ ತಂಡವು ಬೆಂಗಳೂರು ಗ್ರಾಮಾಂತರ ಜಿಲ್ಲಾ ತಂಡದ ವಿರುದ್ಧ 20–19ರಿಂದಲೂ ಜಯ ಸಾಧಿಸಿದ್ದವು. ಮೂರನೇ ಸ್ಥಾನ ಈಗಲ್ಸ್ ಸ್ಪೋರ್ಟ್ಸ್ ಅಕಾಡೆಮಿ ಪಾಲಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.