ಹಾಕಿ: ಭಾರತಕ್ಕೆ ಮಣಿದ ಬೆಲ್ಜಿಯಂ ಆ್ಯಂಟ್‌ವರ್ಪ್‌: ಮನ್‌ದೀಪ್‌ ಸಿಂಗ್‌ ಮತ್ತು ಆಕಾಶ್‌ದೀಪ್‌ ಸಿಂಗ್‌ ಉತ್ತರಾರ್ಧದಲ್ಲಿ ಗಳಿಸಿದ ಗೋಲುಗಳಿಂದ ಭಾರತ ಗುರುವಾರ ಬೆಲ್ಜಿಯಂ ವಿರುದ್ಧ ನಡೆದ ಮೂರು ಪಂದ್ಯಗಳ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ 2–0 ಗೋಲುಗಳಿಂದ ಜಯಗಳಿಸಿತು. ಮನ್‌ದೀಪ್‌ 39ನೇ ನಿಮಿಷ ಮೊದಲ ಗೋಲು ಗಳಿಸಿದರೆ, ಅಂತಿಮ ಕ್ವಾರ್ಟರ್‌ನಲ್ಲಿ (ಪಂದ್ಯದ 54ನೇ ನಿಮಿಷ) ಆಕಾಶದೀಪ್‌ ತಂಡದ ಇನ್ನೊಂದು ಗೋಲನ್ನು ಹೊಡೆದರು.ಸರಣಿಯ ಎರಡನೇ ಪಂದ್ಯ ಸೆ. 28ರಂದು ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.