ವುಹಾನ್‌ ಟೆನಿಸ್‌: ಸೆಮಿಗೆ ಬಾರ್ಟಿ ವುಹಾನ್‌, ಚೀನಾ: ವಿಶ್ವದ ಮೊದಲ ರ‍್ಯಾಂಕಿನ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಈ ಋತುವಿನಲ್ಲಿ ಆರನೇ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ಗುರುವಾರ ವುಹಾನ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ಪೆಟ್ರಾ ಮಾರ್ಟಿಚ್‌ ಅವರನ್ನು 7–6, 3–6, 6–3ರಿಂದ ಸೋಲಿಸಿದರು. ಇತ್ತೀಚೆಗೆ ನಾನು ಆಡಿದ ಅತ್ಯುತ್ತಮ ಪಂದ್ಯಗಳಲ್ಲಿ ಇದೂ ಒಂದು ಎಂದು ಬಾರ್ಟಿ ಈ ಹಣಾಹಣಿಯನ್ನು ಬಣ್ಣಿಸಿದ್ದಾರೆ. ಸೆಮಿಫೈನಲ್‌ ಪಂದ್ಯದಲ್ಲಿ ಶುಕ್ರವಾರ ಅವರು ಬೆಲಾರಸ್‌ನ ಅರಿನಾ ಸಬಲೆಂಕಾ ಎದುರು ಸೆಣಸಲಿದ್ದಾರೆ. ಸತತ ಮೂರನೇ ವರ್ಷ ಬಾರ್ಟಿ ಇಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.