28ರಿಂದ ರಾಜ್ಯಮಟ್ಟದ ಸೆಪಕ್‌ ಟಕ್ರಾ ಟೂರ್ನಿ ಹುಬ್ಬಳ್ಳಿ: ಕರ್ನಾಟಕ ಅಮೆಚೂರ್‌ ಸೆಪಕ್‌ ಟಕ್ರಾ ಸಂಸ್ಥೆ ಹಾಗೂ ಸರ್‌. ಎಂ. ವಿಶ್ವೇಶ್ವರಯ್ಯ ವಸತಿ ಶಾಲೆ ಜಂಟಿಯಾಗಿ ಸೆ. 28 ಹಾಗೂ 29ರಂದು ದಾವಣಗೆರೆ ಜಿಲ್ಲೆಯ ಹರಿಹರದ ಬಳಿಯ ದೊಡ್ಡ ಬಾತಿಯಲ್ಲಿ 8ನೇ ರಾಜ್ಯಮಟ್ಟದ ಜೂನಿಯರ್ ಬಾಲಕ ಹಾಗೂ ಬಾಲಕಿಯರ ಸೆಪಕ್‌ ಟಕ್ರಾ ಟೂರ್ನಿ ಆಯೋಜಿಸಿದೆ. ಮುಂಬರುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲು ಈ ಟೂರ್ನಿ ಟ್ರಯಲ್ಸ್‌ ಕೂಡ ಆಗಿದೆ. ರಾಜ್ಯ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿರುವ ಶಾಲಾ, ಕಾಲೇಜುಗಳು ಹಾಗೂ ತಂಡಗಳು ಪಾಲ್ಗೊಳ್ಳಬಹುದು ಎಂದು ಸಂಸ್ಥೆಯ ಅಧ್ಯಕ್ಷ ಆರ್‌.ಎ. ದೇಸಾಯಿ ತಿಳಿಸಿದ್ದಾರೆ. ಇನ್ನಷ್ಟು ಮಾಹಿತಿಗೆ ಟೂರ್ನಿಯ ಸಂಘಟನಾ ಕಾರ್ಯದರ್ಶಿ ಟಿ.ಎಂ. ಮಲ್ಲಿಕಾರ್ಜುನ ( ಮೊ. 9886986890) ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.