ಗಾಲ್ಫ್: ಅಗ್ರ 10ರತ್ತ ಕಾರ್ತಿಕ್ ಹೆಜ್ಜೆ ಶಾಂಘೈ: ಅಮೋಘ ಆಟ ಮುಂದುವರಿಸಿರುವ ಭಾರತದ ಕಾರ್ತಿಕ್ ಶರ್ಮಾ, ಏಷ್ಯಾ ಪೆಸಿಫಿಕ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಅಗ್ರ 10ರಲ್ಲಿ ಸ್ಥಾನ ಗಳಿಸುವತ್ತ ಹೆಜ್ಜೆ ಇರಿಸಿದ್ದಾರೆ. ಅಗ್ರ ಸ್ಥಾನದಲ್ಲಿರುವ ಆಟಗಾರನಿಗಿಂತ 11 ಶಾಟ್‌ಗಳ ಹಿನ್ನಡೆಯೊಂದಿಗೆ ಶನಿವಾರದ ಆಟ ಆರಂಭಿಸಿದ ಕಾರ್ತಿಕ್ ದಿನದ ಕೊನೆಯಲ್ಲಿ ಜಂಟಿ 11 ಸ್ಥಾನದಲ್ಲಿ ಉಳಿದಿದ್ದಾರೆ. ಆದರೆ ಭಾರತದ ಇತರ ಆಟಗಾರರು ನಿರಾಸೆ ಅನುಭವಿಸಿದರು. ಕಳೆದ ವರ್ಷದ ರನ್ನರ್ ಅಪ್ ರಯಾನ್ ಥಾಮಸ್ ಜಂಟಿ 33ನೇ ಸ್ಥಾನ ಗಳಿಸಿದರೆ ಹರ್ಷಿತ್ ಸಿಂಗ್ ಸೇಥಿ ಜಂಟಿ 58 ಹಾಗೂ ಗಿರಾಜ್ ಖಡ್ಕ ಜಂಟಿ 61ನೇ ಸ್ಥಾನ ಗಳಿಸಿದರು. ಭರವಸೆ ಮೂಡಿಸಿದ್ದ ಆಸ್ಟ್ರೇಲಿಯಾ ಆಟಗಾರ ಬ್ಲೇಕ್ ವಿಂಡ್ರೆಡ್ ಉತ್ತಮ ಆರಂಭ ಕಂಡರೂ ನಂತರ ನಿರಾಸೆ ಕಂಡಿದ್ದರು. ಆದರೆ ಕ್ರಮೇಣ ತಮ್ಮ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಯುಟೊ ಕೊಸುರಗಾವ ಮತ್ತು ಯೂಂಗ್ ಹುವಾ ಲ್ಯೂ ಉತ್ತಮ ಅಮೋಘ ಓಟ ಮುಂದುವರಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.