ಭಾರತಕ್ಕೆ ಒಲಿದ ‘ಎ’ ವಲಯ? ಬೆಂಗಳೂರು: ಏಷ್ಯಾಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಎಲ್ಲ ಪಂದ್ಯಗಳನ್ನು ಸೋತು ‘ಬಿ’ ವಲಯಕ್ಕೆ ಜಾರಿದರೂ ಭಾರತ ಮಹಿಳಾ ತಂಡಕ್ಕೆ ಭಾಗ್ಯದ ಬಾಗಿಲು ತೆರೆದಿದೆ. ‘ಬಿ’ ವಲಯದ ಟೂರ್ನಿ ನಡೆಸಲು ಫಿಬಾಗೆ ಕ್ರೀಡಾಂಗಣ ಲಭಿಸದೇ ಇರುವ ಕಾರಣ ಭಾರತ ತಂಡವನ್ನು ‘ಎ’ ವಲಯದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ. ಹೀಗಾಗಿ ಭಾರತ ತಂಡವು ಒಲಿಂಪಿಕ್ಸ್ ಅರ್ಹತಾ ಸುತ್ತಿಗೂ ಮೊದಲು ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದೆ. ಏಷ್ಯಾ ಒಷಿನಿಯಾ ಪ್ರದೇಶದಿಂದ ಎಂಟನೇ ತಂಡವಾಗಿ ಭಾರತ ತಂಡ ಆಡಲಿದೆ. ಈ ಸ್ಥಾನವು ‘ಬಿ’ ವಲಯದ ವಿಜೇತ ತಂಡಕ್ಕೆ ಸೀಮಿತವಾಗಿತ್ತು. ಆದರೆ ಟೂರ್ನಿಯೇ ನಡೆಸಲು ಸಾಧ್ಯವಾಗದ ಕಾರಣ ಭಾರತಕ್ಕೆ ಆ ಸ್ಥಾನ ನೀಡಲು ನಿರ್ಧರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.