ವಾಟರ್ ಪೋಲೊ: ಜಪಾನ್ ಮೇಲುಗೈ ಬೆಂಗಳೂರು: ಭಾರತದ ವಿರುದ್ಧ ಮೇಲುಗೈ ಸಾಧಿಸಿದ ಜಪಾನ್ ತಂಡದವರು ಏಷ್ಯನ್ ವಯೋವರ್ಗದವರ ವಾಟರ್ ಪೋಲೊದ ಮಹಿಳೆಯರ ವಿಭಾಗದಲ್ಲಿ ಶನಿವಾರ 22–12ರ ಜಯ ಸಾಧಿಸಿದರು.‌ ರೌಂಡ್ ರಾಬಿನ್ ವಿಭಾಗದ ಎಲ್ಲ ಪಂದ್ಯಗಳನ್ನು ಗೆದ್ದ ಕಾರಣ ಪಾಯಿಂಟ್ ಪಟ್ಟಿಯಲ್ಲಿ ಜಪಾನ್ ಅಗ್ರ ಸ್ಥಾನ ಗಳಿಸಿ ಚಿನ್ನಕ್ಕೆ ಕೊರಳೊಡ್ಡಿತು. ಉಜ್ಬೆಕಿಸ್ತಾನ ಬೆಳ್ಳಿ ಗಳಿಸಿದರೆ ಕಜಕಸ್ತಾನ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಪುರುಷರ ವಿಭಾಗದಲ್ಲೂ ಜಪಾನ್ ಆಧಿಪತ್ಯ ಸ್ಥಾಪಿಸಿತು. ಎಂ.ಎಸ್.ಆನಂದ್ ನಾಲ್ಕು ಗೋಲುಗಳ ಮೂಲಕ ಮಿಂಚಿದರೂ ಹಾಲಿ ಚಾಂಪಿಯನ್ನರು 18–9ರಲ್ಲಿ ಗೆದ್ದು ಸಂಭ್ರಮಿಸಿದರು. ಆರ್ಟಿಸ್ಟಿಕ್ ಈಜು ಮತ್ತು ಡೈವಿಂಗ್ ಸ್ಪರ್ಧೆಗಳು ಭಾನುವಾರ ಆರಂಭಗೊಳ್ಳಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.