ಬಾಕ್ಸಿಂಗ್‌: ಆಶಿಶ್‌ಗೆ ಆಘಾತ ನೀಡಿದ ರೋಹಿತ್‌ ಬದ್ದಿ, ಹಿಮಾಚಲ ಪ್ರದೇಶ: ಆಶಿಶ್‌ ಕುಮಾರ್‌ಗೆ ಆಘಾತ ನೀಡಿದ ರೋಹಿತ್‌ ಟೋಕಸ್‌, ರಾಷ್ಟ್ರೀಯ ಪುರುಷರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ 75 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ರೋಹಿತ್‌ 4–1 ಪಾಯಿಂಟ್ಸ್‌ನಿಂದ ಗೆದ್ದರು. ಆಶಿಶ್‌ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ್ದರು. 63 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಶಿವ ಥಾಪಾ ನಾಲ್ಕರ ಘಟ್ಟ ಪ್ರವೇಶಿಸಿದರು. ಕ್ವಾರ್ಟರ್‌ ಫೈನಲ್‌ನಲ್ಲಿ ಶಿವ 4–0 ಪಾಯಿಂಟ್ಸ್‌ನಿಂದ ನವದೆಹಲಿಯ ಯೋಗೇಶ್‌ ಟೋಕಸ್‌ ಅವರನ್ನು ಸೋಲಿಸಿದರು. 57 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಸಚಿನ್‌ ಸಿವಾಚ್‌ 5–0ರಲ್ಲಿ ತೆಲಂಗಾಣದ ಮೈಕಲ್‌ ಡಾಮಿನಿಕ್‌ ಅವರನ್ನು ಮಣಿಸಿದರು. ಸಚಿನ್‌ ಅವರು 2016ರಲ್ಲಿ ನಡೆದಿದ್ದ ವಿಶ್ವ ಯೂತ್‌ ಬಾಕ್ಸಿಂಗ್‌ ಚಾಂ‍ಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.