ಪ್ರೊ ಕಬಡ್ಡಿ: ಪವನ್ ವೀರಾವೇಶ; ಬುಲ್ಸ್‌ಗೆ ಜಯ ಪಂಚಕುಲಾ: ಪವನ್ ಶೆರಾವತ್ ಅವರ ತೋಳ್ಬಲಕ್ಕೆ ಬೆಂಗಳೂರು ಬುಲ್ಸ್‌ ತಂಡವು ಬುಧವಾರ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಜಯಭೇರಿ ಬಾರಿಸಿತು. 39 ಪಾಯಿಂಟ್ಸ್‌ ಸೂರೆ ಮಾಡಿದ ಪವನ್ ಆಟದ ಬಲದಿಂದ ಬೆಂಗಳೂರು ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 59–36ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಹಣಿಯಿತು. ಇದರಿಂದಾಗಿ ಹಾಲಿ ಚಾಂಪಿಯನ್ ತಂಡದ ಪ್ಲೇ ಆಫ್‌ ಆಸೆ ಜೀವಂತವಾಗುಳಿದಿದೆ. ಬುಲ್ಸ್‌ ತಂಡದ ಮಹೇಂದರ್ ಸಿಂಗ್ ಈ ಋತುವಿನಲ್ಲಿ 50 ರೇಡಿಂಗ್ ಪಾಯಿಂಟ್ ಗಳಿಸಿದ ಸಾಧನೆ ಮಾಡಿದರು. ಸ್ಟೀಲರ್ಸ್‌ ತಂಡದ ವಿಕಾಸ್‌ ಖಂಡೋಲಾ ಅವರು ಪ್ರೊ ಕಬಡ್ಡಿಯಲ್ಲಿ 400 ಪಾಯಿಂಟ್ಸ್‌ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ತಂಡವು 30–26ರಿಂದ ಪಟ್ನಾ ಪೈರೇಟ್ಸ್ ತಂಡದ ವಿರುದ್ಧ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.