ಹಾಕಿ ತರಬೇತಿ ಶಿಬಿರಕ್ಕೆ ತಂಡ ಪ್ರಕಟ: ಸುನಿಲ್, ದಿಲ್‌‍ಪ್ರೀತ್‌ಗೆ ಸ್ಥಾನ ನವದೆಹಲಿ (ಪಿಟಿಐ): ಹಾಕಿ ಪ್ರೊ ಲೀಗ್‌ ಟೂರ್ನಿಗೆ ಪೂರ್ವಸಿದ್ಧತೆಯಾಗಿ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಹಾಕಿ ತರಬೇತಿ ಶಿಬಿರಕ್ಕೆ ಭಾರತದ ಸಂಭಾವ್ಯ ತಂಡವನ್ನು ಶನಿವಾರ ಪ್ರಕಟಿಸಲಾಗಿದೆ. ಕನ್ನಡಿಗ ಎಸ್‌.ವಿ.ಸುನಿಲ್‌ ಹಾಗೂ ಯುವ ಸ್ಟ್ರೈಕರ್‌ ದಿಲ್‌ಪ್ರೀತ್‌ ಸಿಂಗ್ ಸ್ಥಾನ ಗಳಿಸಿದ್ದಾರೆ. ಪ್ರೊ ಲೀಗ್‌ನಲ್ಲಿ ಜನವರಿ 18 ಹಾಗೂ 19ರಂದು ಭಾರತ ತಂಡ ನೆದರ್ಲೆಂಡ್ಸ್‌ ಎದುರು ಆಡುವುದರೊಂದಿಗೆ ಅಭಿಯಾನ ಆರಂಭಿಸಲಿದೆ. ಹಾಕಿ ಇಂಡಿಯಾ 32 ಆಟಗಾರರನ್ನು ಶಿಬಿರಕ್ಕೆ ಆಯ್ಕೆ ಮಾಡಿದೆ. ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಉತ್ತಮ ಆಟವಾಡಿದ್ದ ದಿಲ್‌ಪ್ರೀತ್‌, ನವೆಂಬರ್‌ನಲ್ಲಿ ನಡೆದ ಎಫ್‌ಐಎಚ್‌ ಒಲಿಂಪಿಕ್ಸ್ ಕ್ವಾಲಿಫೈಯರ್ಸ್‌ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದ ಕನ್ನಡಿಗ ಸುನಿಲ್‌ ತಂಡದಲ್ಲಿದ್ದಾರೆ. ಸಂಭಾವ್ಯ ಆಟಗಾರರ ತಂಡ: ಪಿ.ಆರ್‌.ಶ್ರೀಜೇಶ್‌, ಕೃಷ್ಣ ಬಹಾದ್ದೂರ್‌ ಪಾಠಕ್‌, ಹರ್ಮನ್‌ಪ್ರೀತ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಬೀರೇಂದ್ರ ಲಾಕ್ರಾ, ರೂಪಿಂದರ್‌ ಪಾಲ್‌ ಸಿಂಗ್‌, ಗುರಿಂದರ್‌ ಸಿಂಗ್, ಅಮಿತ್‌ ರೋಹಿದಾಸ್‌, ಕೊತಜೀತ್‌ ಸಿಂಗ್‌ ಖದಂಗ್‌ಬಮ್‌, ಮನ್‌ಪ್ರೀತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ನೀಲಕಂಠ ಶರ್ಮಾ, ವಿವೇಕ್‌ ಸಾಗರ್‌ ಪ್ರಸಾದ್‌, ಸಿಮ್ರನ್‌ಜೀತ್‌ ಸಿಂಗ್‌, ಆಕಾಶ್‌ ದೀಪ್‌ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಎಸ್‌.ವಿ.ಸುನಿಲ್‌, ಮನದೀಪ್‌ ಸಿಂಗ್‌, ಲಲಿತ್‌ಕುಮಾರ್‌ ಉಪಾಧ್ಯಾಯ, ಗುರುಸಾಹಿಬ್‌ಜೀತ್‌ ಸಿಂಗ್‌, ಶಂಷೇರ್‌ ಸಿಂಗ್‌, ಸೂರಜ್‌ ಕರ್ಕೇರಾ, ಜರ್ಮನ್‌ಪ್ರೀತ್‌ ಸಿಂಗ್‌, ದೀಪ್‌ಸನ್‌ ಟಿರ್ಕಿ, ನೀಲಂ ಸಂಜೀಪ್‌ ಕ್ಸೆಸ್‌, ಜಸ್‌ಕರಣ್‌ ಸಿಂಗ್‌, ರಾಜ್‌ಕುಮಾರ್‌ ಪಾಲ್‌, ಗುರ್ಜಂತ್‌ ಸಿಂಗ್‌, ಸುಮಿತ್‌, ಶೀಲಾನಂದ ಲಾಕ್ರಾ, ಚಿಂಗ್ಲೆಸನಾ ಸಿಂಗ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.