ಈಕ್ವೆಸ್ಟ್ರಿಯನ್: ಜಿತೇಂದ್ರಗೆ ಪ್ರಶಸ್ತಿ ಬೆಂಗಳೂರು: ಎ.ಟಿ.ಕಾಯ್‌ನ ಜಿತೇಂದ್ರ, ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಕ್ವೆಸ್ಟ್ರಿಯನ್ ಚಾಂಪಿಯನ್‌ಷಿಪ್‌ನ ವೈಯಕ್ತಿಕ ವಿಭಾಗದ ಟೆಂಟ್ ಪೆಗ್ಗಿಂಗ್‌ ಸ್ಪರ್ಧೆಯ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎಂಬಸಿ ಅಂತರರಾಷ್ಟ್ರೀಯ ರೈಡಿಂಗ್ ಸ್ಕೂಲ್ ಆವರಣದಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಕಪಿಲ್ ಕುಮಾರ್ ಮತ್ತು ದಿನೇಶ್‌ ಫೊಗೋಡಿಯ ಕ್ರಮವಾಗಿ ದ್ವಿತೀಯ ಮತ್ತು ಮೂರನೇ ಸ್ಥಾನ ಗಳಿಸಿದರು. ಮಕ್ಕಳ ಶೋ ಜಂಪಿಂಗ್‌ನಲ್ಲಿ ಸಿಧಕ್ ಸಿಂಗ್ ಅಗರವಾಲ್‌ ಚಾಂಪಿಯನ್ ಆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.