ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌: ಸೌರವ್‌ ರನ್ನರ್‌ಅಪ್‌ ಮೆಲ್ಬರ್ನ್‌: ಭಾರತದ ಸೌರವ್‌ ಕೊಠಾರಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್‌ ಆದರು. ಫೈನಲ್‌ ಪಂದ್ಯದಲ್ಲಿ ಅವರು ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಎದುರು967– 1307 ಫ್ರೇಮ್‌ಗಳಿಂದ ಸೋತರು. ಗಿಲ್‌ಕ್ರಿಸ್ಟ್‌ ಹೋದ ವರ್ಷ ಲೀಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಸೌರವ್‌ ಎದುರೇ ನಿರಾಸೆ ಕಂಡಿದ್ದರು. ಸಿಂಗಪುರ ಆಟಗಾರ 2013ರಲ್ಲಿ ಕೊನೆಯ ಬಾರಿ ವಿಶ್ವ ಚಾಂಪಿಯನ್‌ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.