ಫ್ರೆಂಚ್ ಓಪನ್ ಬ್ಯಾಡ್ಮಿಂಟನ್: ಬೆಳ್ಳಿ ಗೆದ್ದ ಭಾರತದ ಸಾತ್ವಿಕ್‌ –ಚಿರಾಗ್‌ ಪ್ಯಾರಿಸ್: ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ತಲುಪಿದ್ದಭಾರತದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿ ಇಂಡೋನೇಷ್ಯಾದ ಮರ್ಕಾಸ್‌ ಫೆರ್ನಾಲ್ಡಿ ಹಾಗೂ ಕೆವಿನ್‌ ಸಂಜಯಾ ವಿರುದ್ಧ ಸೋಲು ಕಂಡಿದ್ದಾರೆ. ಭಾರತದಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ –ಚಿರಾಗ್‌ ಶೆಟ್ಟಿ ಜೋಡಿ ಇಂಡೋನೇಷ್ಯಾದಮರ್ಕಾಸ್‌ ಫೆರ್ನಾಲ್ಡಿ ಹಾಗೂ ಕೆವಿನ್‌ ಸಂಜಯಾ ವಿರುದ್ಧ18-21, 16-21 ರ ಅಂತರದಲ್ಲಿ ಸೋಲು ಕಂಡಿತು. ಚಿನ್ನದ ಪದಕದ ನಿರೀಕ್ಷೆ ಹೊಂದಿದ್ದ ಸಾತ್ವಕ್‌, ಚಿರಾಗ್‌ ಜೋಡಿ ಇಂಡೋನೇಷ್ಯಾದ ವಿರುದ್ಧ ಸುಲಭವಾಗಿ ಸೋಲುಂಡಿತು. ' , , @ | ://./0lrGKJfZPa ../NbNV80Q8Jk ರಾಂಕಿರೆಡ್ಡಿ–ಚಿರಾಗ್‌ ಶೆಟ್ಟಿ ಜೋಡಿ ಕಳೆದ ಆಗಸ್ಟ್‌ನಲ್ಲಿ ಥೈಲ್ಯಾಂಡ್‌ ಓಪನ್‌ ಬ್ಯಾಡ್ಮಿಂಟನ್‌ ನಲ್ಲಿ ಟ್ರೋಫಿ ಗೆದಿತ್ತು. ಈ ಪಂದ್ಯದ ಫೈನಲ್‌ನಲ್ಲಿ ಕೇವಲ 35 ನಿಮಿಷಗಳಲ್ಲೇ ಪಂದ್ಯ ಗೆದಿದ್ದರು. ಈ ಟೂರ್ನಿಯಲ್ಲಿಸಾತ್ವಿಕ್‌ – ಚಿರಾಗ್‌ ಜೋಡಿ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.