ಫುಟ್‌ಬಾಲ್‌ ವಿಜಯ್ ಹ್ಯಾಟ್ರಿಕ್‌ ಬೆಂಗಳೂರು: ವಿಜಯ್‌ ಗಳಿಸಿದ ಹ್ಯಾಟ್ರಿಕ್‌ ಗೋಲುಗಳ ಬಲದಿಂದ ಬೆಂಗಳೂರು ಗನ್ನರ್ಸ್‌ ತಂಡ ಬಿಡಿಎಫ್‌ಎ ಬಿ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಗುರುವಾರದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗನ್ನರ್ಸ್‌ 4–0ಯಿಂದ ರಾಯಲ್ಸ್ ಎಫ್‌ಸಿಯನ್ನು ಮಣಿಸಿತು. ಐದನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ವಿಜಯ್‌ 42 ಮತ್ತು 49ನೇ ನಿಮಿಷಗಳಲ್ಲಿ ಮತ್ತೆ ಎರಡು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು. ದಿಲೀಪ್‌ 37ನೇ ನಿಮಿಷದಲ್ಲಿ ಗೋಲು ಗಳಿಸಿದರು. ಶ್ರೀ ಗಜಾನನ ಮತ್ತು ಸನ್‌ರೈಸ್‌ ನಡುವಿನ ಪಂದ್ಯ 4–4ರಲ್ಲಿ ಡ್ರಾಗೊಂಡಿತು. ಗಜಾನನ ತಂಡದ ಪರ ಜೋಶುವಾ (3ನೇ ನಿಮಿಷ), ನಿರಂಜನ್‌ (21 ಮತ್ತು 35ನೇ ನಿ), ಭರಾಹಿ (47ನೇ ನಿ) ಗೋಲು ಗಳಿಸಿದರೆ, ಸನ್‌ರೈಸ್‌ಗೆ ಜೋಶುವಾ (38ನೇ ನಿ), ಲಿಯೊ 31ನೇ ನಿ, ವಿನೋದ್‌ (41 ಮತ್ತು 51ನೇ ನಿ) ಗೋಲು ತಂದಿತ್ತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.