ಗಾಲ್ಫ್‌: ದೀಕ್ಷಾ ಸಾಧನೆ ಕ್ವೀನ್‌ ಬಯಾನ್‌, ಆಸ್ಟ್ರೇಲಿಯಾ: ಭಾರತದ ಯುವ ಗಾಲ್ಫರ್‌ ದೀಕ್ಷಾ ಡಾಗರ್‌, ನ್ಯೂ ಸೌತ್ ವೇಲ್ಸ್ ಓಪನ್‌ ಗಾಲ್ಫ್‌ ಟೂರ್ನಿಯಲ್ಲಿ ಅಗ್ರ ಐದರಲ್ಲಿ ಸ್ಥಾನ ಗಳಿಸಿ ಅಪೂರ್ವ ಸಾಧನೆ ಮಾಡಿದ್ದಾರೆ. ಭಾನುವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಎಡಗೈ ಆಟಗಾರ್ತಿ ದೀಕ್ಷಾ ಒಟ್ಟಾರೆ 72, 67, 69 ಮತ್ತು 70ರಲ್ಲಿ ನಾಲ್ಕು ಸುತ್ತುಗಳನ್ನು ಮುಕ್ತಾಯ ಗೊಳಿಸಿದರು. ಎಎಲ್‌ಪಿಜಿ ಅರ್ಹತಾ ಟೂರ್ನಿಯಲ್ಲಿ ಜಂಟಿ 30ನೇ ಸ್ಥಾನ ಗಳಿಸಿ ಅವರು ಗಮನ ಸೆಳೆದಿದ್ದರು. ನ್ಯೂ ಸೌತ್ ವೇಲ್ಸ್‌ ಟೂರ್ನಿಯ ಪ್ರಶಸ್ತಿ ಇಂಗ್ಲೆಂಡ್‌ನ ಮೇಘನ್‌ ಮೆಕ್‌ಲಾರೆನ್ ಅವರ ಪಾಲಾಯಿತು. ನ್ಯೂಜಿಲೆಂಡ್‌ನ ಮುಂಚಿನ್‌ ಕೇಹ್‌ ಮತ್ತು ಸ್ವೀಡನ್‌ನ ಲಿನ್‌ ಕಾರ್ಲ್‌ಸನ್‌ ರನ್ನರ್ ಅಪ್ ಆದರು. ಭಾರತದ ಭಾರತದ ಅಮನ್‌ದೀಪ್‌ ಡ್ರಾಲ್ ಜಂಟಿ 18ನೇ ಸ್ಥಾನ ಗಳಿಸಿ ಭಾರತದ ಹೊರಗೆ ಜೀವನಶ್ರೇಷ್ಠ ಸಾಧನೆ ಮಾಡಿದರು. ಆಶ್ತಾ ಮದನ್‌ ಕೊನೆಯ ಸುತ್ತಿನಲ್ಲಿ 73ರ ಸಾಧನೆಯೊಂದಿಗೆ ಜಂಟಿ 36ನೇ ಸ್ಥಾನ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.