ಭಾರತಕ್ಕೆ ನ್ಯೂಜಿಲೆಂಡ್‌ ಸವಾಲು ಕೆನ್‌ಬೆರ್ರಾ, ಆಸ್ಟ್ರೇಲಿಯಾ: ಮೂರು ರಾಷ್ಟ್ರಗಳ ಜೂನಿಯರ್‌ ಮಹಿಳಾ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ ಬುಧವಾರ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿರುವ ಭಾರತ ಶುಭಾರಂಭದ ನಿರೀಕ್ಷೆಯಲ್ಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಇನ್ನೊಂದು ತಂಡ ಆಸ್ಟ್ರೇಲಿಯಾ. ವಿಶ್ವದ ಎರಡು ಬಲಿಷ್ಠ ತಂಡಗಳ ಎದುರು ಸಾಮರ್ಥ್ಯ ಅನಾವರಣಕ್ಕೆ ಈ ಟೂರ್ನಿ ಭಾರತಕ್ಕೆ ಉತ್ತಮ ವೇದಿಕೆಯಾಗಲಿದೆ. ಮುಂದಿನ ವರ್ಷ ಜಪಾನ್‌ನಲ್ಲಿ ಎಎಚ್‌ಎಫ್‌ ಜೂನಿಯರ್‌ ಮಹಿಳಾ ಏಷ್ಯಾಕಪ್‌ ಟೂರ್ನಿನಡೆಯಲಿದೆ. ಹಾಗಾಗಿ ಈ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರುವ ನಿರೀಕ್ಷೆ ತಂಡದ ಕೋಚ್‌ ಬಲ್ಜಿತ್‌ ಅವರದ್ದು. ಡಿಸೆಂಬರ್‌ 5ರಂದು ಆಸ್ಟ್ರೇಲಿಯಾ ಎದುರು ಆಡಲಿರುವ ಭಾರತ, 7ರಂದು ನ್ಯೂಜಿಲೆಂಡ್‌ ಮತ್ತೆ 8ರಂದು ಆಸ್ಟ್ರೇಲಿಯಾ ಎದುರು ಕಣಕ್ಕಿಳಿಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.