ಸ್ಕ್ವಾಷ್‌: ಪ್ರೀ ಕ್ವಾರ್ಟರ್‌ಗೆ ಭಾರತದ ಜೋಷ್ನಾ ಕೈರೊ, ಈಜಿಪ್ಟ್‌ : ಉತ್ತಮ ಆಟವಾಡಿದ ಭಾರತದ ಜೋಷ್ನಾ ಚಿನ್ನಪ್ಪ ಇಲ್ಲಿ ನಡೆಯುತ್ತಿರುವ ಸಿಐಬಿ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿರುವ ಜೋಷ್ನಾ, ಎರ ಡನೇ ಸುತ್ತಿನ ಹಣಾಹಣಿಯಲ್ಲಿ ಹಾಂಗ್‌ಕಾಂಗ್‌ನ ಹೊ ಜೆ ಲೊಕ್‌ ಅವರನ್ನು ಎದುರಿಸಿದ್ದರು. ಜೋಷ್ನಾ 11–5, 11–4ರಿಂದ ಮುನ್ನಡೆಯಲ್ಲಿದ್ದ ವೇಳೆ ಗಾಯದ ಕಾರಣ ಹೊ ಜೆ ಪಂದ್ಯದಿಂದ ಹಿಂದೆ ಸರಿದರು. ಭಾರತದ ಆಟಗಾರ್ತಿಯನ್ನು ವಿಜೇತೆ ಎಂದು ಘೋಷಿಸಲಾಯಿತು. 16ರ ಘಟ್ಟದ ಪಂದ್ಯದಲ್ಲಿ ಅವರು ಎರಡನೇ ಶ್ರೇಯಾಂಕದ ಈಜಿಪ್ಟ್‌ನ ನೂರ್‌ ಎಲ್‌ ಶೆರ್ಬಿನಿ ಎದುರು ಆಡಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.