ಅಶುತೋಷ್‌ಗೆ ನಾಯಕತ್ವ ನವದೆಹಲಿ (): ವಿಶ್ವ ರ‍್ಯಾಕೆಟ್ಲಾನ್‌ ಚಾಂಪಿಯನ್‌ಷಿಪ್‌ಗೆ ಅಶುತೋಷ್‌ ಪೆಡ್ನೇಕರ್‌ ನೇತೃತ್ವದ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ನವೆಂಬರ್‌ 20–24ರವರೆಗೆ ಜರ್ಮನಿಯ ಲೇಪಿಜ್‌ನಲ್ಲಿ ಚಾಂಪಿಯನ್‌ಷಿಪ್‌ ನಡೆಯಲಿದೆ. ರ‍್ಯಾಕೆಟ್ಲಾನ್‌ ಎಂದರೆ ನಾಲ್ಕು ಪ್ರಮುಖ ಆಟಗಳಾದಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಟೆನಿಸ್‌ ಹಾಗೂ ಸ್ಕ್ವಾಷ್‌ಗಳನ್ನು ಒಳಗೊಂಡಿರುವ ಕ್ರೀಡೆ. ಭಾರತ ರ‍್ಯಾಕೆಟ್ಲಾನ್‌ ಅಸೋಸಿಯೇಷನ್‌ಗೆಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಚಾಂಪಿಯನ್‌ ಕೆ.ಕೆ.ಚೀಮಾ ಮುಖ್ಯಸ್ಥರಾಗಿದ್ದಾರೆ. ಪೆಡ್ನೇಕರ್‌ ಅವರಲ್ಲದೆ ಬ್ಯಾಡ್ಮಿಂಟನ್‌ ಆಟಗಾರ ವಿಕ್ರಮಾದಿತ್ಯ ಚೌಫ್ಲಾ ಕೂಡ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ವಿಶ್ವ ಯೂನಿವರ್ಸಿಟಿ ಚಾಂಪಿಯನ್‌ಷಿಪ್‌ನಲ್ಲಿಚೌಫ್ಲಾ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.