ವಿಶಾಲ್, ಪೂಜಿತಾ ಮಿಂಚಿನ ಓಟ ಬೆಂಗಳೂರು: ಅಲ್ ಅಮೀನ್‌ ಕಾಲೇಜಿನ ವಿಶಾಲ್ ಪಶ್ಚಾಪುರ್ ಮತ್ತು ಶಾಶಿಬ್ ಕಾಲೇಜಿನ ಪೂಜಿತಾ ಬಿ.ಎನ್‌. ಬುಧವಾರ ಆರಂಭಗೊಂಡ ಬೆಂಗಳೂರು ಕೇಂದ್ರೀಯ ವಿವಿಯ ಎರಡನೇ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 200 ಮೀಟರ್ಸ್ ಓಟದಲ್ಲಿ ಮೊದಲಿಗರಾದರು. 22 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ವಿಶಾಲ್ ಎರಡನೇ ಸ್ಥಾನ ಗಳಿಸಿದ ಪಿ.ಯಶವಂತ್ ಸಾಯ್‌ ಅವರನ್ನು 65 ಮೈಕ್ರೊ ಸೆಕೆಂಡುಗಳಲ್ಲಿ ಹಿಂದಿಕ್ಕಿದರು. ರಾಮಕೃಷ್ಣ ನಾಯಕ್ ಮೂರನೇ ಸ್ಥಾನ ಗಳಿಸಿದರು. ಪೂಜಿತಾ 26.82 ಸೆಕೆಂಡುಗಳಲ್ಲಿ ಅಂತಿಮ ಗೆರೆ ತುಳಿದರು. ಎರಡನೇ ಸ್ಥಾನ ಗಳಿಸಿದ ಶಿವಾನಿ ಆರ್.ಗೌಡ ಗುರಿ ತಲುಪಲು 29.12 ಸೆಕೆಂಡು ತೆಗೆದುಕೊಂಡರು. ರಕ್ಷಾ ತೃತೀಯ ಸ್ಥಾನ ಗಳಿಸಿದರು. ಮೊದಲ ದಿನದ ಫಲಿತಾಂಶಗಳು: ಪುರುಷರ 200 ಮೀಟರ್ಸ್ ಓಟ: ವಿಶಾಲ್ ಪಶ್ಚಾಪುರ್ (ಅಲ್ ಅಮೀನ್ ಕಾಲೇಜು)–1. ಕಾಲ: 22 ಸೆಕೆಂಡು, ಪಿ.ಯಶವಂತ್‌ ಸಾಯ್ (ಅಲ್ ಅಮೀನ್ ಕಾಲೇಜು)–2, ರಾಮಕೃಷ್ಣ ನಾಯಕ್ (ಬಿಬಿಎಂಪಿ ಪ್ರಥಮ ದರ್ಜೆ ಕಾಲೇಜು)–3. 800 ಮೀಟರ್ಸ್ ಓಟ: ಯಶವಂತ್ ಬಿ.ಜಿ (ಅಲ್‌ ಅಮೀನ್ ಕಾಲೇಜು)–1. ಕಾಲ: 2 ನಿಮಿಷ 01.63 ಸೆಕೆಂಡು, ನಚಿಕೇತ್‌ ಎನ್‌ (ಎಸ್‌ಜೆಸಿಸಿ)–2, ಗಗನ್‌ರಾಜ್ ಎ (ಸರ್ಕಾರಿ ಆರ್‌ಸಿ ಕಾಲೇಜು)–3. 10,000 ಮೀಟರ್ಸ್ ಓಟ: ಗೋವಿಂದರಾಜು (ಅಲ್ ಅಮೀನ್ ಕಾಲೇಜು)–1. ಕಾಲ: 37 ನಿಮಿಷ 14.22 ಸೆಕೆಂಡು, ಶೇಷಾದ್ರಿ ವರ್ಮಾ (ಶ್ರೀ ಕೃಷ್ಣ ಪದವಿ ಕಾಲೇಜು)–2, ರಿತಿಕ್ ಭಾರದ್ವಾಜ್ (ಶೇಷಾದ್ರಿಪುರಂ ಕಾಲೇಜು)–3. ಲಾಂಗ್ ಜಂಪ್‌: ಆರ್ಯ (ಅಲ್ ಅಮೀನ್ ಕಾಲೇಜು)–1. ದೂರ–6.76 ಮೀಟರ್ಸ್‌, ನವೀನ್ ಬಿ (ಅಲ್‌ ಅಮೀನ್ ಕಾಲೇಜು)–2, ಕೀರ್ತಿ ಆಜಾದ್ (ಆರ್‌ಜೆಎಸ್‌ಐಎಂಎಸ್‌)–3. ಮಹಿಳೆಯರ 200 ಮೀಟರ್ಸ್ ಓಟ: ಪೂಜಿತಾ ಬಿ.ಎನ್ (ಶಾಶಿಬ್ ಕಾಲೇಜು)–1. ಕಾಲ: 26.82 ಸೆಕೆಂಡು, ಶಿವಾನಿ ಆರ್‌.ಗೌಡ (ಸೇಂಟ್ ಜೋಸೆಫ್ಸ್ ಕಾಲೇಜು)–2, ಶ್ರೀ ರಕ್ಷಾ ಐ.ಕೆ (ಶೇಷಾದ್ರಿಪುರ ಕಾಲೇಜು, ಯಲಹಂಕ)–3. 800 ಮೀಟರ್ಸ್ ಓಟ: ಅರ್ಪಿತಾ (ಅಲ್‌ ಅಮೀನ್ ಕಾಲೇಜು)–1. ಕಾಲ: 2ನಿಮಿಷ 28.89 ಸೆಕೆಂಡು, ರಕ್ಷಾ (ಆಚಾರ್ಯ ಐಜಿಎಸ್‌)–2, ದೀಪಾಂಜಲಿ ಟಿ.ಕೆ (ಆರ್‌ಜೆಎಸ್‌ಐಎಂಎಸ್‌, ಕೋರಮಂಗಲ)–3. 10000 ಮೀಟರ್ಸ್ ಓಟ: ಮಲ್ಲೇಶ್ವರಿ ರಾಥೋಡ್ (ಶಾಶಿಬ್ ಕಾಲೇಜು)–1. ಕಾಲ: 43 ನಿಮಿಷ 12.93 ಸೆಕೆಂಡು, ಭಾಗ್ಯ ಬಿ (ವಿವೇಕಾನಂದ ಪದವಿ ಕಾಲೇಜು)–2, ವರ್ಷಿತಾ ಜಿ.ಆರ್ (ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಯಲಹಂಕ)–3. ಲಾಂಗ್ ಜಂಪ್‌: ಅಮಿತಾ ಐ.ಜೆ (ಎಂಎಲ್‌ಎ ಕಾಲೇಜು)–1, ದೂರ: 4.27 ಮೀಟರ್ಸ್‌, ಕಾವ್ಯಶ್ರೀ (ನ್ಯಾಷನಲ್ ಕಾಲೇಜು, ಬಸವನಗುಡಿ)–2, ಶರಧಿ ಎ.ಎಂ (ವಿಜಯ ಕಾಲೇಜು ಆರ್‌ವಿ ರಸ್ತೆ)–3. ಶಾಟ್‌ಪಟ್: ಆ್ಯಷ್ಲಿನ್‌ (ಎಸ್‌ಜೆಸಿಸಿ)–1, ಅಂತರ: 7.73 ಮೀಟರ್ಸ್‌, ಸನಾ ಎನ್‌ (ಪ್ರೆಸಿಡೆನ್ಸಿ ಕಾಲೇಜು)–2, ಅನುಷಾ (ಆಚಾರ್ಯ ಐಜಿಎಸ್‌)–3. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.