ಐಪಿಎಲ್‌ ಸಿಕ್ಸರ್‌ಗಳ ‘ಖೇಲ್‌’ ಐಪಿಎಲ್‌ ಮತ್ತು ಗೇಲ್‌ ಐಪಿಎಲ್‌ ಎಂದರೆ ಕ್ರಿಸ್‌ ಗೇಲ್‌ ಎಂದು ಹೇಳುವಷ್ಟರ ಮಟ್ಟಕ್ಕೆ ವೆಸ್ಟ್‌ ಇಂಡೀಸ್‌ನ ಈ ದೈತ್ಯ ಆಟಗಾರ ಟೂರ್ನಿಯಲ್ಲಿ ಪ್ರಭಾವ ಬೀರಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರು ಚೆಂಡನ್ನು ಎತ್ತಿ ಪ್ರೇಕ್ಷಕರ ಬಳಿಗೆ ಅಟ್ಟುವ ಮೋಹಕ ನೋಟ. ಈ ಟೂರ್ನಿಯಲ್ಲಿ ಈ ವರೆಗೆ ಒಟ್ಟಾರೆ ಹೆಚ್ಚು ಸಿಕ್ಸರ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಈ ಎಡಗೈ ಬ್ಯಾಟ್ಸ್‌ಮನ್‌ ಮೆರೆಯುತ್ತಿದ್ದಾರೆ. ನಾಲ್ಕು ಆವೃತ್ತಿಗಳಲ್ಲೂ ಹೆಚ್ಚು ಸಿಕ್ಸರ್‌ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಗೇಲ್ ಗಳಿಸಿದ್ದರು. 11ನೇ ಆವೃತ್ತಿಯಲ್ಲೂ ಇಂಥ ದಾಖಲೆಯ ಕಡೆಗೆ ಅವರು ದಾಪುಗಾಲು ಹಾಕಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ರುಚಿ ಸವಿಯುವ ಯಾರನ್ನಾದರೂ ಈ ಟೂರ್ನಿಯಲ್ಲಿ ಹೆಚ್ಚು ಇಷ್ಟವಾಗುವ ಅಂಶ ಯಾವುದು ಎಂದು ಕೇಳಿದರೆ ಥಟ್ಟನೆ ಕೇಳಿ ಬರುವ ಉತ್ತರ ‘ಸಿಕ್ಸರ್‌’ ಎಂಬುದು. ಸಿಕ್ಸರ್‌ಗಳಿಗೂ ಐಪಿಎಲ್‌ಗೂ ಅಂಥ ನಂಟು ಉಂಟು. ಬ್ಯಾಟ್ಸ್‌ಮನ್‌ಗಳೇ ಮೆರೆಯುವ ಈ ಕೂಟದಲ್ಲಿ ಚೆಂಡು ಬೌಂಡರಿ ಗೆರೆಯ ಮೇಲಿಂದ ಸಾಗಿ ಗ್ಯಾಲರಿಗಳಲ್ಲಿ ‘ಲ್ಯಾಂಡ್‌’ ಆಗುವ ಸಂದರ್ಭದ ಮೋಜು ಅನುಭವಿಸುವುದಕ್ಕೆಂದೇ ಕ್ರೀಡಾಂಗಣಗಳಿಗೆ ಧಾವಿಸುವ ಪ್ರೇಕ್ಷಕರು ಹೆಚ್ಚು ಇದ್ದಾರೆ. ಆ ನೋಟದ ಆಮೋದ ಉಣ್ಣುವುದಕ್ಕೆಂದೇ ಟಿವಿ ಮುಂದೆ ಕುಳಿತುಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. 6,066 – ಮೊದಲ ಹತ್ತು ಆವೃತ್ತಿಗಳಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳು 454 ಈ ಬಾರಿ ದಾಖಲಾಗಿರುವ ಸಿಕ್ಸರ್‌ಗಳು (ಅವಧಿ: ??) 107 – ಮೊದಲ ಎರಡು ಸ್ಥಾನದಲ್ಲಿರುವವರ ನಡುವಿನ ಸಿಕ್ಸರ್‌ಗಳ ಅಂತರ ಹಿಂದಿನ ಆವೃತ್ತಿಗಳಲ್ಲಿ ಹೆಚ್ಚು ಸಿಕ್ಸರ್‌ ಹೊಡೆದ ಆಟಗಾರರು ವರ್ಷ; 2008; 2009; 2010; 2011; 2012; 2013; 2014; 2015; 2016; 2017 ಅಟಗಾರ; ಸನತ್ ಜಯಸೂರ್ಯ; ಆ್ಯಡಂ ಗಿಲ್‌ಕ್ರಿಸ್ಟ್‌; ರಾಬಿನ್ ಉತ್ತಪ್ಪ; ಕ್ರಿಸ್ ಗೇಲ್‌; ಕ್ರಿಸ್ ಗೇಲ್‌; ಕ್ರಿಸ್ ಗೇಲ್‌; ಗ್ಲೆನ್‌ ಮ್ಯಾಕ್ಸ್‌ವೆಲ್‌; ಕ್ರಿಸ್ ಗೇಲ್‌; ವಿರಾಟ್‌ ಕೊಹ್ಲಿ; ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಕ್ಸರ್‌ಗಳು; 31; 29; 27; 44; 59; 51; 36; 38; 38; 26 ** ಹಿಂದಿನ ಆವೃತ್ತಿಗಳಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳು ವರ್ಷ; 2008; 2009; 2010; 2011; 2012; 2013; 2014; 2015; 2016; 2017 ಸಿಕ್ಸರ್‌ಗಳು; 580; 441; 555; 604; 663; 623; 674; 654; 600; 672 ** ಈ ವರೆಗೆ ಹೆಚ್ಚು ಸಿಕ್ಸರ್ ಸಿಡಿಸಿದ ಐವರು ಆಟಗಾರ; ಪಂದ್ಯಗಳು; ಇನಿಂಗ್ಸ್‌; ಸಿಕ್ಸರ್‌ ಕ್ರಿಸ್ ಗೇಲ್‌; 105; 104; 288 ರೋಹಿತ್ ಶರ್ಮಾ; 167; 162; 181 ಸುರೇಶ್‌ ರೈನಾ; 168; 164; 180 ಎಬಿ ಡಿವಿಲಿಯರ್ಸ್‌; 135; 124; 179 ಮಹೇಂದ್ರ ಸಿಂಗ್ ದೋನಿ; 167; 151; 176 ವಿರಾಟ್ ಕೊಹ್ಲಿ; 157; 149; 172 ಡೇವಿಡ್‌ ವಾರ್ನರ್‌; 114; 114; 160 ಯೂಸುಫ್ ಪಠಾಣ್‌; 157; 140; 153 ಕೀರನ್ ಪೊಲಾರ್ಡ್‌; 130; 119; 151 ಯುವರಾಜ್ ಸಿಂಗ್‌; 126; 120; 142 ಹೆಚ್ಚು ಸಿಕ್ಸರ್ ಗಳಿಸಿದ ಕನ್ನಡಿಗರು ಆಟಗಾರ; ಪಂದ್ಯ; ಇನಿಂಗ್ಸ್‌; ಸಿಕ್ಸರ್‌ ರಾಬಿನ್ ಉತ್ತಪ್ಪ; 157; 150; 137 ಮನೀಷ್ ಪಾಂಡೆ; 111; 103; 66 ಮಯಂಕ್ ಅಗರವಾಲ್‌; 60; 55; 37 ಕೆ.ಎಲ್‌.ರಾಹುಲ್‌; 46; 37; 36 ಕರುಣ್ ನಾಯರ್‌; 62; 56; 30 ಸ್ಟುವರ್ಟ್‌ ಬಿನ್ನಿ; 81; 59; 29 ರಾಹುಲ್ ದ್ರಾವಿಡ್‌; 89; 82; 28 ** ಈ ಬಾರಿ ಹೆಚ್ಚು ಸಿಕ್ಸರ್‌ ಗಳಿಸಿದವರು ಕ್ರಿಸ್‌ ಗೇಲ್‌; 23 ಎಬಿ ಡಿವಿಲಿಯರ್ಸ್‌; 23 ಆ್ಯಂಡ್ರೆ ರಸೆಲ್‌; 23 ಅಂಬಟಿ ರಾಯುಡು; 20 ಮಹೇಂದ್ರ ಸಿಂಗ್‌ ದೋನಿ; 20 ರಿಷಭ್‌ ಪಂತ್; 20 ಶೇನ್ ವಾಟ್ಸನ್‌; 19 ಶ್ರೇಯಸ್ ಅಯ್ಯರ್‌; 19 ಎವಿನ್ ಲೂಯಿಸ್‌; 13 ಸಂಜು ಸ್ಯಾಮ್ಸನ್‌; 13 ** ಇನಿಂಗ್ಸ್ ಒಂದರಲ್ಲಿ ಹೆಚ್ಚು ಸಿಕ್ಸರ್‌ ಆಟಗಾರ; ಸಿಕ್ಸರ್‌; ಸ್ಥಳ; ವರ್ಷ ಕ್ರಿಸ್‌ ಗೇಲ್‌; 17; ಬೆಂಗಳೂರು; 2013 ಬ್ರೆಂಡನ್ ಮೆಕ್ಲಮ್‌; 13; ಬೆಂಗಳೂರು; 2008 ಕ್ರಿಸ್‌ ಗೇಲ್‌; 13; ದೆಹಲಿ; 2012 ಎಬಿ ಡಿವಿಲಿಯರ್ಸ್‌; 12; ಬೆಂಗಳೂರು; 2016 ಕ್ರಿಸ್ ಗೇಲ್‌; 12; ಬೆಂಗಳೂರು; 2015 ಆ್ಯಂಡ್ರೆ ರಸೆಲ್‌; 11; ಚೆನ್ನೈ; 2018 ಸನತ್ ಜಯಸೂರ್ಯ; 11; ಮುಂಬೈ; 2008 ಮುರಳಿ ವಿಜಯ್‌; 11; ಚೆನ್ನೈ; 2010 ಕ್ರಿಸ್ ಗೇಲ್‌; 11; ಮೊಹಾಲಿ; 2018 ಶ್ರೇಯಸ್ ಅಯ್ಯರ್‌; 10; ದೆಹಲಿ; 2018 ಈ ಬಾರಿ ಓವರೊಂದರಲ್ಲಿ ಹೆಚ್ಚು ಸಿಕ್ಸರ್‌ ಆಟಗಾರ; ಸಿಕ್ಸರ್‌; ಒಟ್ಟು ರನ್‌; ಸ್ಥಳ ಶ್ರೇಯಸ್ ಅಯ್ಯರ್‌; 4; 28; ದೆಹಲಿ ಕ್ರಿಸ್ ಗೇಲ್‌; 4; 26; ಮೊಹಾಲಿ ಜೋಸ್‌ ಬಟ್ಲರ್‌; 3; 23; ದೆಹಲಿ ಆ್ಯಂಡ್ರೆ ರಸೆಲ್‌; 3; 21; ಕೋಲ್ಕತ್ತ ಕಾಲಿನ್ ಡಿ ಗ್ರ್ಯಾಂಡ್‌ಹೋಮ್‌; 3; 21; ಬೆಂಗಳೂರು (ಎಲ್ಲ ಮಾಹಿತಿಗಳು ಮೇ 2ರ ಪಂದ್ಯಗಳ ವರೆಗಿನದ್ದು; ಆಧಾರ–ಐಪಿಎಲ್ ವೆಬ್‌ಸೈಟ್‌) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.