ಸ್ನೂಕರ್‌: ಪಂಕಜ್ ಅಡ್ವಾನಿಗೆ ಪ್ರಶಸ್ತಿ ನವದೆಹಲಿ: ಬುಧವಾರ ಮುಕ್ತಾಯಗೊಂಡ ಏಷ್ಯಾ ಸ್ನೂಕರ್‌ ಟೂರ್‌ನ ಎರಡನೇ ಲೆಗ್‌ನ ಪ್ರಶಸ್ತಿ ಭಾರತದ ಪಂಕಜ್ ಅಡ್ವಾನಿ ಪಾಲಾಯಿತು. ಅವರು ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಆಗಿದ್ದಾರೆ. ಫೈನಲ್‌ ಸುತ್ತಿನಲ್ಲಿ ಪಂಕಜ್‌ ಅವರು ಚೀನಾದ ಜೂ ರೇತಿ ವಿರುದ್ಧ 6–1 ಫ್ರೇಮ್‌ಗಳಿಂದ ಗೆದ್ದರು. ಮೂರನೇ ಫ್ರೇಮ್‌ನಲ್ಲಿ ಮಾತ್ರ ಭಾರತದ ಆಟಗಾರ ಹಿನ್ನಡೆ ಅನುಭವಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.