ಅಪ್ಪನಾದ ಸ್ಮಿತ್ ಮತ್ತೆ ನಿಶ್ಚಿತಾರ್ಥ ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್‌ ತಮ್ಮ ಗೆಳತಿ ರೋಮಿ ಲ್ಯಾನ್‌ಫ್ರ್ಯಾಂಚಿ ಅವರೊಂದಿಗೆ ಮಂಗಳವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 2014ರಿಂದ ಅವರು ಲಿವ್‌ ಇನ್ ರಿಲೇಷನ್‌ಷಿಪ್‌ನಲ್ಲಿದ್ದರು. ರೋಮಿ ಈಚೆಗೆ ಗಂಡುಮಗುವಿಗೆ ಜನ್ಮ ನೀಡಿದ್ದರು. ಸ್ಮಿತ್ ಅವರು ತಮ್ಮ ನಿಶ್ಚಿತಾರ್ಥದ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ. ಸ್ಮಿತ್ ಅವರು 2011ರಲ್ಲಿ ಪಾಪ್ ಗಾಯಕಿ ಮಾರ್ಗನ್ ಡೇನ್ ಅವರನ್ನು ವಿವಾಹವಾಗಿದ್ದರು. ಮೊದಲ ಪತ್ನಿ ಜೊತೆ ಮೂರು ವರ್ಷ ಸಂಸಾರ ನಡೆಸಿದ್ದರು. ಸ್ಮಿತ್ 2 ಮಕ್ಕಳ ತಂದೆಯಾಗಿದ್ದರು. ಬಳಿಕ 2014ರಲ್ಲಿ ಮೊದಲ ಪತ್ನಿಗೆ ವಿಚ್ಚೇದನ ನೀಡಿ, ರೊಮಿಯೊಂದಿಗೆ ಇದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.