ಇನ್ನೂ ಫುಟ್‌ಬಾಲ್ ಆಡುವೆ: ಬೋಲ್ಟ್‌ ಮೆಲ್ಬರ್ನ್‌: ಆಸ್ಟ್ರೇಲಿಯಾದ ಕ್ಲಬ್ ಸೆಂಟ್ರಲ್ ಕೋಸ್ಟ್ ಮರಿನರ್ಸ್‌ ಜೊತೆ ಮಾಡಿರುವ ಒಪ್ಪಂದ ಮುಗಿದಿದ್ದರೂ ಫುಟ್‌ಬಾಲ್‌ನಲ್ಲಿ ಮುಂದುವರಿಯಲು ಬಯಸಿರುವುದಾಗಿ ವೇಗದ ಓಟಗಾರ ಉಸೇನ್ ಬೋಲ್ಟ್‌ ಹೇಳಿದ್ದಾರೆ. ಬೋಲ್ಟ್ ಅವರ ಒಪ್ಪಂದ ಶನಿವಾರ ಮುಗಿದಿತ್ತು. ನವೀಕರಿಸುವ ಸಂಬಂಧ ನಡೆದ ಮಾತುಕತೆ ವಿಫಲವಾಗಿತ್ತು. ಅವರಿಗೆ ನಿರೀಕ್ಷಿತ ಮೊತ್ತವನ್ನು ನೀಡಲು ತಂಡದ ಆಡಳಿತ ಮುಂದಾಗಲಿಲ್ಲ. ಮಾತುಕತೆಯ ನಂತರ ನೀಡಿದ ಹೇಳಿಕೆಯಲ್ಲಿ ‘ಇದು ದುರದೃಷ್ಟಕರ’ ಎಂದಷ್ಟೇ ಬೋಲ್ಟ್ ಹೇಳಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.