ಮ್ಯಾರಥಾನ್‌: ಲೇಸಿಯಾಗೆ ಪ್ರಶಸ್ತಿ ನ್ಯೂಯಾರ್ಕ್‌: ಇಥಿಯೋಪಿಯಾದ ಲೇಸಿಯಾ ದೇಸಿಸಾ ಅವರು ಭಾನುವಾರ ನಡೆದ ನ್ಯೂಯಾರ್ಕ್‌ ಸಿಟಿ ಮ್ಯಾರಥಾನ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ದೇಸಿಸಾ 2 ಗಂಟೆ 5 ನಿಮಿಷ 59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇಥಿಯೋಪಿಯಾದ ಮತ್ತೊಬ್ಬ ಓಟಗಾರ ಶುರಾ ಕಿಟಾಟ, ಎರಡನೇ ಸ್ಥಾನ ಗಳಿಸಿದರು.ಅವರು ನಿಗದಿತ ದೂರ ಕ್ರಮಿಸಲು 2 ಗಂಟೆ 6 ನಿಮಿಷ 01 ಸೆಕೆಂಡು ತೆಗೆದುಕೊಂಡರು. ಕೀನ್ಯಾದ ಜಿಯೊಫ್ರೆ ಕಮವೊರೊರ್‌ (2:06.26ಸೆ.) ಮೂರನೇಯವರಾಗಿ ಸ್ಪರ್ಧೆ ಮುಗಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.