ರಾಷ್ಟ್ರೀಯ ತಂಡದಲ್ಲಿ ಕನ್ನಡಿಗ ಸೂರ್ಯ ನವದೆಹಲಿ: ಕನ್ನಡಿಗ ಎನ್‌.ಎಂ. ಸೂರ್ಯ ಅವರು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರೀಯ ಜೂನಿಯರ್‌ ಪುರುಷರ ಹಾಕಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. 33 ಸಂಭಾವ್ಯ ಪುರುಷ ಹಾಗೂ 39 ಮಹಿಳಾ ಆಟಗಾರರ ಪಟ್ಟಿಯನ್ನು ಭಾನುವಾರ ಹಾಕಿ ಇಂಡಿಯಾ ಪ್ರಕಟಿಸಿದೆ. ಸೋಮವಾರ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಆರಂಭವಾಗುವ ಶಿಬಿರವು ನಾಲ್ಕು ವಾರಗಳ ಕಾಲ ನಡೆಯಲಿದೆ. ಪುರುಷರ ತಂಡ ಗೋಲ್‌ಕೀಪರ್ಸ್: ಪವನ್‌, ಪ್ರಶಾಂತ್‌ಕುಮಾರ್‌ ಚೌಹಾನ್‌, ಸಾಹಿಲ್‌ ಕುಮಾರ್‌ ನಾಯಕ್‌. ಡಿಫೆಂಡರ್ಸ್: ಸುಮನ್‌ ಬೆಕ್‌, ಪ್ರತಾಪ್‌ ಲಾಕ್ರಾ, ಸಂಜಯ್‌, ಯಶ್‌ದೀಪ್‌ ಸಿವಾಚ್‌, ಮನದೀಪ್‌ ಮೋರ್‌, ಪರಮ್‌ಪ್ರೀತ್‌ ಸಿಂಗ್‌, ದಿನಾಚಂದ್ರ ಸಿಂಗ್‌ ಮೊಯಿರಂಗ್‌ಧೆಮ್‌, ನಬಿನ್‌ ಕುಜುರ್‌, ಶಾರದಾನಂದ ತಿವಾರಿ, ನೀರಜ್‌ ಕುಮಾರ್‌ ವಾರಿಬಮ್‌. ಮಿಡ್‌ಫೀಲ್ಡರ್ಸ್: ಸುಖಮನ್‌ಸಿಂಗ್‌, ಗ್ರೆಗೊರಿ ಕ್ಸೆಸ್‌ ಅಂಕಿತ್‌ ಪಾಲ್‌, ಆಕಾಶದೀಪ್‌ ಸಿಂಗ್‌ ಜೂನಿಯರ್‌, ವಿಷ್ಣುಕಾಂತ್‌ ಸಿಂಗ್‌, ಗೋಪಿಕುಮಾರ್ ಸೋಣಕರ್‌, ವಿಶಾಲ್‌ ಅಂಟಿಲ್‌, ಸೂರ್ಯ ಎನ್‌.ಎಂ., ಮಣಿಂದರ್‌ ಸಿಂಗ್‌, ರವಿಚಂದ್ರ ಸಿಂಗ್‌ ಮೊಯಿರಂಗಧೆಮ್‌. ಫಾರ್ವಡ್ಸ್: ಸುದೀಪ್‌ ಚಿರ್ಮಾಕೊ, ರಾಹುಲ್‌ ಕುಮಾರ್‌ ರಾಜ್‌ಭರ್‌, ಉತ್ತಮ್‌ ಸಿಂಗ್‌, ಎಸ್‌.ಕಾರ್ತಿ, ದಿಲ್‌ಪ್ರೀತ್‌ ಸಿಂಗ್‌, ಅರೈಜೀತ್‌ ಸಿಂಗ್‌ ಹುಂಡಲ್‌, ಅಮನ್‌ದೀಪ್‌ ಸಿಂಗ್‌, ಪ್ರಭಜೋತ್‌ ಸಿಂಗ್‌, ಶಿವಂ ಆನಂದ್‌, ಅರ್ಷದೀ‍ಪ್‌ ಸಿಂಗ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.