ಟೆನಿಸ್‌: ಬಾರ್ಟಿಗೆ ಡಬ್ಲ್ಯುಟಿಎ ಗರಿ ಶೆನ್‌ಜೆನ್‌, ಚೀನಾ: ಸಾಮರ್ಥ್ಯಕ್ಕೆ ತಕ್ಕ ಆಟವಾಡಿದ ವಿಶ್ವ ಅಗ್ರ ಕ್ರಮಾಂಕದ ಆಟಗಾರ್ತಿ ಆಶ್ಲೆ ಬಾರ್ಟಿ ಅವರು ಡಬ್ಲ್ಯುಟಿಎ ಫೈನಲ್ಸ್‌ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಅವರು, ಹಾಲಿ ಚಾಂಪಿಯನ್‌ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಅವರನ್ನು 6–4, 6–3ರಿಂದ ಸೋಲಿಸಿದರು. ಟ್ರೋಫಿಯೊಂದಿಗೆ ಬಾರ್ಟಿ ಟೆನಿಸ್‌ ಇತಿಹಾಸದಲ್ಲೇ ಗರಿಷ್ಠ ನಗದು ಬಹುಮಾನ ತಮ್ಮದಾಗಿಸಿಕೊಂಡರು. ದಾಖಲೆಯ ಸುಮಾರು ₹ 31 ಕೋಟಿ (4.42 ಮಿಲಿಯನ್‌ ಅಮೆರಿಕನ್‌ ಡಾಲರ್‌) ಬಹುಮಾನವನ್ನು ಆಸ್ಟ್ರೇಲಿಯಾದ ಬಾರ್ಟಿ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.