ಬ್ಯಾಡ್ಮಿಂಟನ್‌: ಕಂಚು ಗೆದ್ದ ಲಕ್ಷ್ಯಸೇನ್‌ ಮರ್ಖಾಮ್‌, ಕೆನಡಾ: ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರೂ ಜಯ ಸಾಧಿಸಲು ಆಗದ ಭಾರತದ ಲಕ್ಷ್ಯಸೇನ್‌, ವಿಶ್ವ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಭಾನುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದಸೆಮಿಫೈನಲ್‌ ಪಂದ್ಯದಲ್ಲಿ ಲಕ್ಷ್ಯಸೇನ್‌, ತಾಯ್ಲೆಂಡ್‌ನಕುನ್ಲಾವುತ್‌ ವಿಟಿಸರ್ನ್‌ ಎದುರು 22–20, 16–21, 13–21ರಿಂದ ಸೋತರು. ಪಂದ್ಯ ಒಂದು ತಾಸು 11 ನಿಮಿಷ ನಡೆಯಿತು. ‘ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಮೊದಲನೇ ಗೇಮ್‌ನಲ್ಲಿ ಪ್ರಯಾಸದಿಂದ ಗೆದ್ದರೂ ಎರಡನೇ ಗೇಮ್‌ನಲ್ಲಿ ಎದುರಾಳಿ ಭಾರಿ ತಿರುಗೇಟು ನೀಡಿದರು. ಹೀಗಾಗಿ ಜಯದ ಕನಸು ನನಸಾಗಲಿಲ್ಲ’ ಎಂದು ಲಕ್ಷ್ಯಸೇನ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.