ಬಿಲಿಯರ್ಡ್ಸ್‌: ಪಂಕಜ್ ಅಡ್ವಾಣಿಗೆ 21ನೇ ಕಿರೀಟ ಯಾಂಗೂನ್, ಮ್ಯಾನ್ಮಾರ್: ಬೆಂಗಳೂರಿನ ಪಂಕಜ್ ಅಡ್ವಾಣಿ ಅವರು ಭಾನುವಾರ ನಡೆದ ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದರು. ಇದು ಅವರಿಗೆ ಒಲಿದ 21ನೇ ವಿಶ್ವ ಕಿರೀಟವಾಗಿದೆ. ಯಾಂಗೂನ್‌ನಲ್ಲಿ ಅವರು ಗೆದ್ದ ನಾಲ್ಕನೇ ಪ್ರಶಸ್ತಿಯೂ ಇದಾಗಿದೆ. ಬೆಂಗಳೂರಿನವರೇ ಆದ ಬಿ. ಭಾಸ್ಕರ್ ಅವರು ಬೆಳ್ಳಿ ಪದಕ ಗೆದ್ದರು. ಭಾಸ್ಕರ್ ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಬೆಳ್ಳಿ ಗೆದ್ದಿದ್ದರು. ವಿಶ್ವಮಟ್ಟದಲ್ಲಿ ಒಂದು ಕಂಚಿನ ಪದಕ ಪಡೆದಿದ್ದರು. ಈ ಟೂರ್ನಿಯ ಫೈನಲ್‌ನಲ್ಲಿ ಪಂಕಜ್ ಅವರು ಭಾಸ್ಕರ್ ವಿರುದ್ಧ ಜಯಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.