ಪ್ರೊ ಕಬಡ್ಡಿ: ಅಜಯ್ ಮಿಂಚಿನ ಆಟ ಅಹಮದಾಬಾದ್ : ತಮಿಳ್ತಲೈವಾಸ್ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಮಂಗಳವಾರ ಸಂಜೆ ತೆಲುಗು ಟೈಟನ್ಸ್‌ ಎದುರು ರೋಚಕ ಜಯ ಸಾಧಿಸಿತು. ಟ್ರಾನ್ಸ್‌ಸ್ಟೇಡಿಯಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತಲೈವಾಸ್ ತಂಡವು 27–23ರಿಂದ ಟೈಟನ್ಸ್‌ ತಂಡವನ್ನು ಮಣಿಸಿತು. ತಲೈವಾಸ್ ತಂಡದ ಅಜಯ್ ಠಾಕೂರ್ ಚುರುಕಿನ ದಾಳಿ ನಡೆಸಿ ಎಂಟು ಪಾಯಿಂಟ್ ಮತ್ತು ಕನ್ನಡಿಗ ಸುಖೇಶ್ ಹೆಗ್ಡೆ ಒಟ್ಟು ಐದು ಪಾಯಿಂಟ್ ಗಳಿಸಿದರು. ಟೈಟನ್ಸ್‌ ತಂಡವೂ ಮೊದಲ ಹಂತದಲ್ಲಿ ಉತ್ತಮವಾಗಿ ಆಡಿತು. ತಂಡದ ರಾಹುಲ್ ಚೌಧರಿ ಒಟ್ಟು ಎಂಟು ಪಾಯಿಂಟ್‌ಗಳನ್ನು ಗಳಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ನೀಲೇಶ್ ಸಾಳುಂಕೆ ಅವರು ನಾಲ್ಕು ಅಂಕಗಳನ್ನು ಕಲೆ ಹಾಕಿದರು. ದಿನದ ಇನ್ನೊಂದು ಪಂದ್ಯದಲ್ಲಿ ದಬಂಗ್‌ ಡೆಲ್ಲಿ 29–26 ಪಾಯಿಂಟ್ಸ್‌ ನಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡದ ಎದುರು ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.