ಐದನೇ ಚಿನ್ನ ಗೆದ್ದ ಅಂಜುಮ್‌ ತಿರುವನಂತಪುರ: ಐದನೇ ಚಿನ್ನದ ಪದಕ ಗೆಲ್ಲುವ ಮೂಲಕ ಪಂಜಾ ಬ್‌ನ ಅಂಜುಮ್ ಮೌದ್ಗಿಲ್ ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಬುಧವಾರ ನಡೆದ ಮಹಿಳೆಯರ 50 ಮೀಟರ್ಸ್ ರೈಫಲ್‌ ಪ್ರೋನ್‌ ವಿಭಾಗದ ವೈಯಕ್ತಿಕ ಮತ್ತು ತಂಡ ವಿಭಾಗದ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಳ್ಳುವುದರೊಂದಿಗೆ ಅವರು ಈ ಸಾಧನೆ ಮಾಡಿದರು. ಹರಿಯಾಣದ ಶಿರೀನ್ ಗೋದಾರ ಅವರು ಜೂನಿಯರ್‌ ಮಹಿಳೆಯರ 50 ಮೀಟರ್ಸ್‌ ಪ್ರೋನ್‌ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಬುಧವಾರ ಚಿನ್ನ ಗೆದ್ದರು. ಈ ಮೂಲಕ ಐದು ಚಿನ್ನ ಗಳಿಸಿ ಮಿಂಚಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.