ವೀನಸ್‌ ಅಪಘಾತ ಪ್ರಕರಣ ಮುಕ್ತಾಯ? ವೆಸ್ಟ್ ಪಾಮ್‌ ಬೀಚ್‌, ಫ್ಲೋರಿಡಾ: ಟೆನಿಸ್ ತಾರೆ ವೀನಸ್ ವಿಲಿಯಮ್ಸ್‌ ಮತ್ತು ಜೆರೋಮ್ ಬಾರ್ಸನ್ ಅವರ ಕಾರುಗಳ ನಡುವೆ ಸಂಭವಿಸಿದ ಡಿಕ್ಕಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ನ್ಯಾಯಾಲಯದ ದಾಖಲೆಗಳು ಹೇಳುತ್ತಿವೆ. 2017ರ ಜೂನ್‌ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ 79 ವರ್ಷದ ಜೆರೋಮ್‌ ಸಾವಿಗೀಡಾಗಿದ್ದರು. ಪಾಮ್‌ ಬೀಚ್‌ನ ಕೌಂಟಿ ನ್ಯಾಯಾಲಯವು ಕಳೆದ ವಾರ ಪ್ರಕರಣದ ತನಿಖೆಗೆ ಅಂತ್ಯ ಹಾಡಿದ್ದಾರೆ ಎಂಬುದು ನ್ಯಾಯಾಲಯದ ದಾಖಲೆಗಳಿಂದ ಗೊತ್ತಾಗಿದೆ. ಅಪಘಾತ ಸ್ಥಳದ ವಿಡಿಯೊ ಪರಿಶೀಲಿಸಿದ ತನಿಖಾಧಿಕಾರಿಗಳು ವೀನಸ್ ತಪ್ಪಿತಸ್ಥರಲ್ಲ ಎಂದು ಹೇಳಿದ್ದರು. ‘ಹಸಿರು ನಿಶಾನೆ ಬಂದ ನಂತರವೇ ವೀನಸ್ ಕಾರನ್ನು ಮುಂದಕ್ಕೆ ತೆಗೆದಿದ್ದಾರೆ. ಆದರೆ ಎದುರುಗಡೆಯಿಂದ ಬಂದ ಕಾರೊಂದು ಅನಿರೀಕ್ಷಿತವಾಗಿ ಎಡಕ್ಕೆ ಚಲಿಸಿದ ಕಾರಣ ವೀನಸ್‌ ತಮ್ಮ ಕಾರನ್ನು ತಕ್ಷಣ ನಿಲ್ಲಿಸಬೇಕಾಗಿ ಬಂದಿತ್ತು’ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.