ಬ್ಯಾಸ್ಕೆಟ್‌ಬಾಲ್‌: ಸೆಮಿಗೆ ಡಿವೈಇಎಸ್‌ ಬೆಂಗಳೂರು: ಭೂಮಿಕಾ ಗಳಿಸಿದ 13 ಪಾಯಿಂಟ್‌ಗಳ ನೆರವಿನಿಂದ ವಿದ್ಯಾನಗರದ ಡಿವೈಇಎಸ್‌ ತಂಡ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸಿರುವ ರಾಜ್ಯಮಟ್ಟದ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು. ಕಂಠೀರವ ಕ್ರೀಡಾಂಗಣದಲ್ಲಿ ಬುಧ ವಾರ ನಡೆದ ಪಂದ್ಯದಲ್ಲಿ ಈ ತಂಡ ಜೆಎಸ್‌ಸಿಯನ್ನು 58–30ರಿಂದ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು. ಫಲಿತಾಂಶಗಳು: ಪುರುಷರ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌: ಎಎಸ್‌ಸಿ ತಂಡಕ್ಕೆ ಹಲಸೂರು ಬ್ಯಾಸ್ಕೆಟ್‌ ಬಾಲ್ ಕ್ಲಬ್‌ ವಿರುದ್ಧ 53–35ರಿಂದ ಗೆಲುವು; ಡಿವೈಇಎಸ್‌ಗೆ ಎಂಸಿಎಚ್‌ಎಸ್ ವಿರುದ್ಧ 55–36ರಿಂದ ಜಯ; ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ಗೆ ರಾಜ್‌ಕುಮಾರ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ವಿರುದ್ಧ 57–29ರಿಂದ ಗೆಲುವು; ಎಸ್‌.ಬ್ಲೂಸ್‌ಗೆ ಮೈಸೂರು ಬ್ಯಾಸ್ಕೆಟ್‌ಬಾಲ್ ಕ್ಲಬ್‌ ವಿರುದ್ಧ 59–43ರಿಂದ ಜಯ; ಜಿಎಸ್‌ಟಿ ಮತ್ತು ಕಸ್ಟಮ್ಸ್‌ ತಂಡಕ್ಕೆ ಕೋರಮಂಗಲ ಎಸ್‌ಸಿ ವಿರುದ್ಧ 63–49ರಿಂದ ಜಯ; ಸಿಎಂಪಿಗೆ 72–56ರಿಂದ ಯಂಗ್‌ ಒರಾಯನ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ ವಿರುದ್ಧ ಗೆಲುವು; ವಿಜಯ ಬ್ಯಾಂಕ್‌ಗೆ 85–12ರಿಂದ ಭರತ್‌ ಎಸ್‌ಯು ಎದುರು ಗೆಲುವು. ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್‌: ಡಿವೈಇಎಸ್‌ ವಿದ್ಯಾನಗರಕ್ಕೆ 58–30ರಿಂದ ಜೆಎಸ್‌ಸಿ ವಿರುದ್ಧ ಗೆಲುವು; ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್ ಕ್ಲಬ್‌ಗೆ 47–22ರಿಂದ ಮೈಸೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ಎದುರು ಜಯ; ನೈರುತ್ಯ ರೈಲ್ವೆ ತಂಡಕ್ಕೆ 42–13ರಿಂದ ಯಂಗ್ ಒರಾಯನ್ಸ್‌ ವಿರುದ್ಧ ಜಯ; ಮೌಂಟ್ಸ್ ಕ್ಲಬ್‌ಗೆ 40–21ರಿಂದ ಮೈಸೂರು ಡಿವೈಇಎಸ್‌ ವಿರುದ್ಧ ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.