ಸಾಧನೆಯ ಹುಮ್ಮಸ್ಸಿನಲ್ಲಿ ಮಂಗಳೂರು ವಿವಿ ಮೂಡುಬಿದಿರೆ, ಮಂಗಳೂರು: ಸ್ವರಾಜ್‌ ಮೈದಾನದಲ್ಲಿ ಶನಿವಾರದಿಂದ ನಡೆಯುವ ಅಖಿಲ ಭಾರತ 79ನೇ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್‌ಗೆ ಸಿದ್ಧತೆ ಪೂರ್ಣಗೊಂಡಿದೆ. ಎರಡು ಬಾರಿಯ ಸಮಗ್ರ ಚಾಂಪಿಯನ್‌ ಮಂಗಳೂರು ವಿಶ್ವವಿದ್ಯಾಲಯ, ಈ ಬಾರಿಯೂ ಜಯಿಸುವ ಹುಮ್ಮಸ್ಸಿನಲ್ಲಿದೆ. ಇದಕ್ಕಾಗಿ ಕ್ರೀಡಾಪಟುಗಳು ಭರ್ಜರಿ ತಯಾರಿ ಕೂಡಾ ನಡೆಸಿದ್ದಾರೆ. ಕ್ಯಾಲಿಕಟ್‌ ವಿಶ್ವವಿದ್ಯಾಲಯದ ಜಿಸ್ನಾ ಮ್ಯಾಥ್ಯೂ, ದೆಹಲಿ ವಿವಿಯ ಅಮೂಲ್‌ ಜೇಕಬ್‌, ಕೋಟಯಂ ಮಹಾತ್ಮ ಗಾಂಧಿ ವಿವಿಯ ಬಿ.ಬಿ. ಸೆಬಾಸ್ಟಿಯನ್‌, ಜರೀನಾ ಜೋಸೆಫ್‌, ಮಂಗಳೂರು ವಿವಿಯ ಧಾರುಣ್‌ ಅಯ್ಯಸ್ವಾಮಿ, ಪ್ರವೀಣ್‌, ರಂಜಿತ್‌ಕುಮಾರ್‌, ಶುಭಾ, ಪ್ರಜ್ವಲ್‌ ಮಂದಣ್ಣ, ಅಭಿನಯ ಶೆಟ್ಟಿ ಮುಂತಾದವರು ಕೂಟದಲ್ಲಿ ಸ್ಪರ್ಧಿಸುವ ಪ್ರಮುಖ ಅಥ್ಲೀಟ್‌ಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.