ರಾಷ್ಟ್ರೀಯ ಸೈಕ್ಲಿಂಗ್‌: ಮೊದಲ ಚಿನ್ನ ಗೆದ್ದ ಕರ್ನಾಟಕದ ಸೌಮ್ಯಾ ಹುಬ್ಬಳ್ಳಿ: ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ರೋಡ್ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ಕರ್ನಾಟಕ ಮೊದಲ ಚಿನ್ನದ ಪದಕ ಜಯಿಸಿತು. ವಿಜಯಪುರದ ಸರ್ಕಾರಿ ಸೈಕ್ಲಿಂಗ್‌ ಕ್ರೀಡಾ ನಿಲಯದ ಸೌಮ್ಯಾ ಅಂತಾಪುರ ಈ ಸಾಧನೆ ಮಾಡಿದರು. 18 ವರ್ಷದ ಒಳಗಿನವರ ಬಾಲಕಿಯರ 40 ಕಿ.ಮೀ. ಮಾಸ್ಡ್‌ ಸ್ಟಾರ್ಟ್‌ ವಿಭಾಗದಲ್ಲಿ ಸೌಮ್ಯಾ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಜಮಖಂಡಿ ತಾಲ್ಲೂಕಿನ ನಾವಲಗಿ ಗ್ರಾಮದ ದಾನಮ್ಮ ಚಿಚಖಂಡಿ ಕಂಚು ಜಯಿಸಿದರು. 16 ವರ್ಷದೊಳಗಿನ ಬಾಲಕಿಯರ ವಿಭಾಗದ 20 ಕಿ.ಮೀ. ಮಾಸ್ಡ್‌ ಸ್ಟಾರ್ಟ್‌ ಸ್ಪರ್ಧೆಯಲ್ಲಿ ವಿಜಯಪುರದ ಅಂಕಿತಾ ರಾಠೋಡ್‌ ಬೆಳ್ಳಿ ಪಡೆದರು. ಇದರಿಂದ ಕರ್ನಾಟಕದ ಸ್ಪರ್ಧಿಗಳು ಒಟ್ಟು 13 ಪದಕಗಳನ್ನು ಜಯಿಸಿದಂತಾಯಿತು. ಮೊದಲ ದಿನ ನಾಲ್ಕು, ಎರಡನೇ ದಿನ ಆರು ಪದಕಗಳನ್ನು ಗೆದ್ದುಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.