ಜಿಮ್ನಾಸ್ಟಿಕ್ಸ್‌: ದೀಪಾಗೆ ನಿರಾಸೆ ನವದೆಹಲಿ: ಭಾರತದ ದೀಪಾ ಕರ್ಮಾಕರ್‌ ಅವರು ಜರ್ಮನಿಯ ಕೊಟ್‌ಬಸ್‌ನಲ್ಲಿ ನಡೆಯುತ್ತಿರುವ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್‌ ವಿಶ್ವಕಪ್‌ನ ಬ್ಯಾಲೆನ್ಸ್ ಬೀಮ್‌ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ. ಎರಡನೇ ದಿನವಾದ ಶನಿವಾರ ನಡೆದ ಸ್ಪರ್ಧೆಯಲ್ಲಿ ಅವರು 23ನೇ ಸ್ಥಾನ ಗಳಿಸಿದ್ದಾರೆ. ತ್ರಿ‍‍ಪುರಾದ ದೀಪಾ 11.66 (4.8+6.266) ಸ್ಕೋರ್‌ ಗಳಿಸಿದರು. ಪುರುಷರ ಪ್ಯಾರಲಲ್ ಬಾರ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಒಟ್ಟು 29 ಮಂದಿಯ ಪೈಕಿ ಭಾರತದ ರಾಕೇಶ್ ಪಾತ್ರ 16ನೇ ಸ್ಥಾನ ಗಳಿಸಿದರು. ಅವರು 13,033 ಸ್ಕೋರ್‌ ಕಲೆ ಹಾಕಿದ್ದರು. ಪುರುಷರ ವಾಲ್ಟ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲಿ ಆಶಿಶ್‌ ಕುಮಾರ್‌ 12.866 ಸ್ಕೋರ್‌ನೊಂದಿಗೆ 23ನೇ ಸ್ಥಾನ ಗಳಿಸಿದರು. ಈ ಸ್ಪರ್ಧೆಯಲ್ಲಿ ಒಟ್ಟು 27 ಜಿಮ್ನಾಸ್ಟ್‌ಗಳಿದ್ದರು. ಫ್ಲೋರ್ ಎಕ್ಸೈಸ್‌ನಲ್ಲಿ ಪಾಲ್ಗೊಳ್ಳಬೇಕಾಗಿದ್ದ ಅರುಣಾ ರೆಡ್ಡಿ ಕಾಲುನೋವಿನಿಂದಾಗಿ ಕಣಕ್ಕೆ ಇಳಿಯಲಿಲ್ಲ.‌ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.