ಪ್ರೀ ಕ್ವಾರ್ಟರ್‌ಗೆ ಆಯುಷ್‌ ಶೆಟ್ಟಿ ಬೆಂಗಳೂರು: ಕರ್ನಾಟಕದ ಆಯುಷ್‌ ಶೆಟ್ಟಿ ಮತ್ತು ಸುಜನ್ಯನ್‌ ಕಿಣಿ ಅವರು ರಾಷ್ಟ್ರೀಯ ಸಬ್‌ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಅಂಗಳದಲ್ಲಿ ಬುಧವಾರ ನಡೆದ 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಆಯುಷ್‌ 21–15, 21–9 ನೇರ ಗೇಮ್‌ಗಳಿಂದ ಹರಿಯಾಣದ ಅನ್ಸ್‌ ತಿರ್ದಿಯಾ ಅವರನ್ನು ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಸುಜನ್ಯನ್‌ 16–21, 21–15, 22–20ರಲ್ಲಿ ಕೆ.ಸಾತ್ವಿಕ್‌ ರೆಡ್ಡಿ ಎದುರು ಗೆದ್ದರು. 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪೈಪೋಟಿಯಲ್ಲಿ ಕರ್ನಾಟಕದ ಸಿ.ಎಸ್‌.ಸಾಕೇತ್‌ 21–6, 21–10ರಲ್ಲಿ ಸಮಕ್ಷ್‌ ಡಾಲ್ಟಾ ಅವರನ್ನು ಸೋಲಿಸಿದರು. 15 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್‌ ಪೈಪೋಟಿಯಲ್ಲಿ ವಿಜೇತಾ ಹರೀಶ್‌ 21–12, 21–18ರಲ್ಲಿ ಅನ್ಸಿಕಾ ಕುಮಾವತ್‌ ವಿರುದ್ಧ ವಿಜಯಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.