ಪ್ರೊ ಕಬಡ್ಡಿ ಲೀಗ್‌: ಬುಲ್ಸ್‌ಗೆ ಸೋಲು ಪುಣೆ: ನಾಯಕ ರೋಹಿತ್ ಕುಮಾರ್‌ ಮತ್ತೊಮ್ಮೆ ಮಿಂಚಿನ ಆಟವಾಡಿ ‘ಸೂಪರ್ ಟೆನ್‌’ ಸಾಧನೆ ಮಾಡಿದರು. ಆದರೂ ಬೆಂಗಳೂರು ಬುಲ್ಸ್ ತಂಡ ಸೋಲಿಗೆ ಶರಣಾಯಿತು. ಭಾನುವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ‍ಪಂದ್ಯದಲ್ಲಿ ಬುಲ್ಸ್‌ 32–35 ರಿಂದ ಪಟ್ನಾ ಪೈರೇಟ್ಸ್‌ಗೆ ಮಣಿಯಿತು. ರೋಹಿತ್ 13 ಪಾಯಿಂಟ್ ಗಳಿಸಿದರೆ, ಪವನ್ ಶೆರಾವತ್‌ ಆರು ಪಾಯಿಂಟ್ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಹರಿ ಯಾಣ ಸ್ಟೀಲರ್ಸ್ತಂಡ ದಬಂಗ್ ಡೆಲ್ಲಿ ವಿರುದ್ಧ 34–27ರಿಂದ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.