ದಯಾನಂದ ಪೈ ಕೆಎಸ್‌ಡಬ್ಲ್ಯುಎ ಅಧ್ಯಕ್ಷರಾಗಿ ಆಯ್ಕೆ ಬೆಂಗಳೂರು: ಕರ್ನಾಟಕ ರಾಜ್ಯ ವೇಟ್‌ಲಿಫ್ಟರ್ಸ್‌ ಸಂಸ್ಥೆಯ (ಕೆಎಸ್‌ಡಬ್ಲ್ಯುಎ) ಅಧ್ಯಕ್ಷರಾಗಿ ಡಾ.ಪಿ.ದಯಾನಂದ ಪೈ ಅವರುಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಕೆಎಸ್‌ಡಬ್ಲ್ಯುಎ ಸಾಮಾನ್ಯ ಸಭೆ ಮತ್ತು ಚುನಾವಣೆಯಲ್ಲಿ ಕಾರ್ಯಕಾರಿ ಅಧ್ಯಕ್ಷರಾಗಿ ಡಿ.ಚಂದ್ರಹಾಸ್‌ ರಾಯ್‌, ಗೌರವ ಕಾರ್ಯದರ್ಶಿಯಾಗಿ ಎಸ್‌.ಎಚ್‌. ಆನಂದ ಗೌಡ, ಖಜಾಂಚಿಯಾಗಿ ಶ್ಯಾಮಲಾ ಶೆಟ್ಟಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಪ್ರಮೋದ್‌ ಕುಮಾರ್‌ ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರವಧಿಯು 2019ರಿಂದ 2022ರವರೆಗೆ ಮುಂದುವರೆಯುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.