ಬಿಲಿಯರ್ಡ್ಸ್‌: ವರ್ಷ, ವಿದ್ಯಾ ಫೈನಲ್‌ಗೆ ಬೆಂಗಳೂರು: ವರ್ಷಾ ಸಂಜೀವ್ ಮತ್ತು ವಿದ್ಯಾ ಪಿಳ್ಳೈ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಬಿಲಿಯರ್ಡ್ಸ್ ಮತ್ತು ಸ್ನೂಕರ್‌ ಟೂರ್ನಿಯ ಸೀನಿಯರ್ ಮಹಿಳೆಯರ ವಿಭಾಗದ ಫೈನಲ್ ಪ್ರವೇಶಿಸಿದರು. ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ವರ್ಷಾ 3–0ಯಿಂದ ಚಿತ್ರಾ ವಿರುದ್ಧ ಗೆದ್ದರು. ವಿದ್ಯಾ ಪಿಳ್ಳೈ 3–1ರಿಂದ ಕೀರ್ತನಾ ಅವರನ್ನು ಮಣಿಸಿದರು. ಪುರುಷರ ವಿಭಾಗದ ಎರಡನೇ ಸುತ್ತಿನಲ್ಲಿ ಬಿ.ವಿ.ಎಸ್‌ ಮೂರ್ತಿ, 3–0ಯಿಂದ ಉಮಾಶಂಕರ್ ಎದುರು ಗೆದ್ದರು. ಪ್ರಭಾಕರನ್‌ 3–0ಯಿಂದ ತೌಸೀಫ್‌ ಖಾನ್‌ ಅವರನ್ನು ಮಣಿಸಿದರು. ದೀಪಕ್‌ 3–1ರಿಂದ ವೆಂಕಟ್‌ ಜಯ್‌ ಎದುರು ಜಯ ಗಳಿಸಿದರು. ಆದಿಲ್‌ ಶೆರ್ಜಾಯ್‌ 3–0ಯಿಂದ ರಾಘವೇಂದ್ರ ವಿರುದ್ಧ ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.