ಬೆಂಗಳೂರು ಓಪನ್‌ ಗಾಲ್ಫ್‌: ಮುಖೇಶ್ ಮುನ್ನಡೆ ಬೆಂಗಳೂರು: ಮುಖೇಶ ಕುಮಾರ್, ಹನಿ ಬೈಸೋಯಾ ಮತ್ತು ಹರೇಂದರ್ ಗುಪ್ತಾ ಅವರು ಗುರುವಾರ ಆರಂಭವಾದ ಬೆಂಗಳೂರು ಓಪನ್ ಗಾಲ್ಫ್‌ ಚಾಂಪಿಯನ್‌ಷಿಪ್‌ನಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕರ್ನಾಟಕ ಗಾಲ್ಫ್‌ ಅಸೋಸಿಯೇಷನ್ (ಕೆಜಿಎ)ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನಲ್ಲಿ ಮುಖೇಶ್ ಅವರು ಉತ್ತಮವಾಗಿ ಆಡಿದರು. ದೆಹಲಿಯ ಬೈಸೋಯಾ ಮತ್ತು ಚಂಡೀಗಡದ ಹರೇಂದರ್ ಅವರು ಆರು ಬರ್ಡೀಸ್ ಮತ್ತು ಬೋಗಿಗಳನ್ನು ಗಳಿಸಿದರು. ಬೈಸೋಯಾ ಅವರು ಹೋದ ವರ್ಷ ರನ್ನರ್ ಅಪ್ ಆಗಿದ್ದರು. ಶ್ರೀಲಂಕಾದ ಅನುರಾ ರೋಹನ್ 5 ಅಂಡರ್ 67 ಮಾಡಿ, ನಾಲ್ಕನೇ ಸ್ಥಾನ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.