ಡಿ.9ರಿಂದ ಟೂರ್‌ ಆಫ್‌ ನೀಲಗಿರೀಸ್‌ ಸೈಕ್ಲಿಂಗ್‌ ರೇಸ್‌ ಬೆಂಗಳೂರು: ರೈಡ್‌ ಎ ಸೈಕಲ್‌ ಪ್ರತಿಷ್ಠಾನ ನಡೆಸುವ ಟೂರ್‌ ಆಫ್‌ ನೀಲಗಿರೀಸ್‌ (ಟಿಎಫ್‌ಎನ್‌) ಸೈಕ್ಲಿಂಗ್‌ ಟೂರ್‌ ಭಾನುವಾರದಿಂದ (ಡಿ.9) ಆರಂಭವಾಗಲಿದೆ. ಮೈಸೂರಿನಿಂದ ಆರಂಭವಾಲಿರುವ ರೇಸ್‌ನಲ್ಲಿ ಸೈಕ್ಲಿಸ್ಟ್‌ಗಳು, ಹಾಸನ, ಕುಶಾಲನಗರ, ಸುಲ್ತಾನ ಬತೇರಿ, ಊಟಿ, ಕಲ್ಪೆಟ್ಟ ಮಾರ್ಗವಾಗಿ ಮೈಸೂರಿಗೆ ಹಿಂದಿರುಗಲಿದ್ದಾರೆ. ವಿಶ್ವದ ನಾನಾ ದೇಶಗಳ 18 ಮಂದಿ ಮಹಿಳೆಯರು ಸೇರಿದಂತೆ110 ಸೈಕ್ಲಿಸ್ಟ್‌ಗಳು ಭಾಗವಹಿಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.