ಶೂಟಿಂಗ್: ಜ್ಯೋತಿ ಸಣ್ಣಕ್ಕಿಗೆ ಚಿನ್ನ ಬದಲು ಬೆಳ್ಳಿ ಹುಬ್ಬಳ್ಳಿ: ಕೇರಳದ ತಿರುವನಂತಪುರದಲ್ಲಿ ಇತ್ತೀಚಿಗೆ ನಡೆದ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನ ಪ್ಯಾರಾ ಸ್ಪರ್ಧಿಗಳ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ ಅವರಿಗೆ ಈಗ ಚಿನ್ನದ ಬದಲು ಬೆಳ್ಳಿ ಪದಕ ಲಭಿಸಿದೆ. ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿಯಲ್ಲಿ ಜ್ಯೋತಿ ಸಣ್ಣಕ್ಕಿ ತರಬೇತಿ ಪಡೆದಿದ್ದರು. ಈ ಅಕಾಡೆಮಿಯ ಸಂಸ್ಥಾಪಕ ರವಿಚಂದ್ರ ಬಾಲೆಹೊಸೂರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಜ್ಯೋತಿ ಸಣ್ಣಕ್ಕಿ ಚಿನ್ನದ ಪದಕ ಜಯಿಸಿದ್ದಾರೆ ಎಂದು ಸಂಘಟಕರು ಮೊದಲು ತಿಳಿಸಿದ್ದರು. ನಂತರ ಪರಿಶೀಲಿಸಿದಾಗ ಅವರು ಜಯಿಸಿದ್ದು ಬೆಳ್ಳಿ ಎಂದು ಖಚಿತವಾಗಿದೆ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.