ಸಾಯ್‌ ಕೋಚ್‌ ಆಗಿ ಅಶ್ವಿನಿ ನೇಮಕ ನವದೆಹಲಿ: ಕರ್ನಾಟಕದ ಅಶ್ವಿನಿ ಅಕ್ಕುಂಜಿ ಮತ್ತು ಕೇರಳದ ಮೊಹಮ್ಮದ್‌ ಅನಾಸ್‌ ಸೇರಿ 11 ಮಂದಿ ಒಲಿಂಪಿಯನ್‌ಗಳು ಮತ್ತು ಮೂರು ಮಂದಿ ಪ್ಯಾರಾಲಿಂಪಿಯನ್‌ಗಳನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಶುಕ್ರವಾರ, ಕೋಚ್‌ ಮತ್ತು ಸಹಾಯಕ ಕೋಚ್‌ಗಳನ್ನಾಗಿ ನೇಮಿಸಿದೆ. ಅಶ್ವಿನಿ ಅವರು 2010ರ ಕಾಮನ್‌ವೆಲ್ತ್‌ ಮತ್ತು ಏಷ್ಯನ್‌ ಕ್ರೀಡಾಕೂಟದ 4X400 ಮೀಟರ್ಸ್‌ ರಿಲೇ ಮತ್ತು 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಅನಾಸ್‌, ಈ ಬಾರಿಯ ಏಷ್ಯನ್‌ ಕ್ರೀಡಾಕೂಟದಲ್ಲಿ ಮೂರು ಬೆಳ್ಳಿಯ ಪದಕಗಳನ್ನು ಜಯಿಸಿದ್ದರು. ಮ್ಯಾರಥಾನ್‌ ಓಟಗಾರ್ತಿ ಒ.ಪಿ.ಜೈಶಾ, ಹಾಕಿ ಆಟಗಾರ್ತಿ ಸವಿತಾ ಪೂನಿಯಾ, ಪ್ಯಾರಾಲಿಂಪಿಯನ್‌ಗಳಾದ ಮರಿಯಪ್ಪನ್‌ ತಂಗವೇಲು, ಶರದ್‌ ಕುಮಾರ್‌ (ಹೈಜಂಪ್‌) ಮತ್ತು ಅಂಕುರ್‌ ಧಾಮಾ (1500 ಮೀ.) ಅವರು ಈ ಪಟ್ಟಿಯಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.