ಗಾಲಿ ಕುರ್ಚಿ ಟೆನಿಸ್‌: ಫೈನಲ್‌ಗೆ ಪ್ರತಿಮಾ ಬೆಂಗಳೂರು: ಕರ್ನಾಟಕದ ‍ಪ್ರತಿಮಾ ಎನ್‌.ರಾವ್‌ ಅವರು ಅಖಿಲ ಭಾರತ ಎಐಟಿಎ ರ‍್ಯಾಂಕಿಂಗ್‌ ಗಾಲಿ ಕುರ್ಚಿ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಕಬ್ಬನ್‌ ಪಾರ್ಕ್‌ನಲ್ಲಿರುವ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಅಂಗಳದಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ಪ್ರತಿಮಾ 6–0, 6–0ರಲ್ಲಿ ಖುಷ್ಬು ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಕೆ.ಶಿಲ್ಪಾ 6–0, 6–0ರಲ್ಲಿ ಎ.ಸುಧಾ ವಿರುದ್ಧ ಗೆದ್ದರು. ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರತಿಮಾ ಮತ್ತು ಶಿಲ್ಪಾ 6–0, 6–0ರಲ್ಲಿ ರುತ್‌ ರಾಜೇಶ್ವರಿ ಮತ್ತು ಸ್ಟೆಲ್ಲಾ ಅವರನ್ನು ಮಣಿಸಿದರು. ಇನ್ನೊಂದು ಪಂದ್ಯದಲ್ಲಿ ಅಮ್ಮು ಮೋಹನ್‌ ಮತ್ತು ನಳಿನಾ ಕುಮಾರಿ 6–0, 6–0ರಲ್ಲಿ ಎಸ್‌.ಎಚ್‌.ಮಂಜುಳಾ ಮತ್ತು ಸುಧಾ ಎದುರು ಗೆದ್ದರು. ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕೆ.ಕಾರ್ತಿಕ್‌ 7–6, 3–6, 6–4ರಲ್ಲಿ ಶೇಖರ್‌ ಎದುರು ಗೆದ್ದರು. ಇತರ ಪಂದ್ಯಗಳಲ್ಲಿ ಶಿವಪ್ರಸಾದ್‌ 6–3, 6–1ರಲ್ಲಿ ಸುರೇಶ್‌ ಕುಮಾರ್ ಎದುರೂ, ಎಸ್‌.ಬಾಲಚಂದ್ರ 6–0, 6–0ರಲ್ಲಿ ಮದುಸೂಧನ್‌ ಮೇಲೂ ವಿಜಯಿಯಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.