ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌: ಆಕಾಶ್‌, ಕರುಣಾ ಮುಡಿಗೆ ಸಿಂಗಲ್ಸ್‌ ಕಿರೀಟ ಬೆಂಗಳೂರು: ಆಕಾಶ್‌ ಕೆ.ಜೆ. ಹಾಗೂ ಕರುಣಾ ಗಜೇಂದ್ರನ್‌ ಅವರು ಸಿ.ವಿ.ಎಲ್. ಶಾಸ್ತ್ರಿಸ್ಮಾರಕ ರಾಜ್ಯ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಸಬ್‌ ಜೂನಿಯರ್‌ ಬಾಲಕರ ಹಾಗೂ ಬಾಲಕಿಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು. ಚಾಂಪಿಯನ್ಸ್ ಟೇಬಲ್‌ ಟೆನಿಸ್‌ ಅಕಾಡೆಮಿಯಲ್ಲಿಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಎರಡನೇ ದಿನವಾದ ಮಂಗಳವಾರ ಆಕಾಶ್‌ ಕೆ.ಜೆ ಸಬ್‌ಜೂನಿಯರ್‌ ಬಾಲಕರ ವಿಭಾಗದ ಫೈನಲ್‌ನಲ್ಲಿ ಸುಜನ್‌ ಆರ್‌. ಭಾರದ್ವಾಜ್‌ ಅವರನ್ನು 13–11, 4–11, 11–8, 14–12ರಿಂದ ಮಣಿಸಿದರು. ಸೆಮಿಫೈನಲ್‌ ಹಣಾಹಣಿಯಲ್ಲಿ ಆಕಾಶ್‌, ಯಶವಂತ್‌.ಪಿ ಎದುರು 11–7, 11–4, 11–2ರಿಂದ ಗೆದ್ದಿದ್ದರು. ಸುಜನ್‌ ಅವರು ಪಿ.ವಿ.ಶ್ರೀಕಾಂತ್‌ ಕಶ್ಯಪ್‌ ವಿರುದ್ಧ 15–13, 11–3, 11–8ರಿಂದ ಜಯ ಸಾಧಿಸಿದ್ದರು. ಸಬ್‌ ಜೂನಿಯರ್‌ ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಕರುಣಾ ಗಜೇಂದ್ರನ್‌ ಅವರು ಸಹನಾ ಎಚ್‌. ಮೂರ್ತಿ ಅವರನ್ನು 11–6, 13–11, 10–12, 11–6ರಿಂದ ಪರಾಭವಗೊಳಿಸಿದರು. ನಾಲ್ಕರ ಘಟ್ಟದ ಹಣಾಹಣಿಗಳಲ್ಲಿ ಕರುಣಾ, ತೃಪ್ತಿ ಪುರೋಹಿತ್‌ ಎದುರು 11–5, 11–8, 11–4ರಿಂದಲೂ, ಸಹನಾ ಅವರು ದೇಷ್ನಾ ಎಮ್‌. ವಂಶಿಕಾ ವಿರುದ್ಧ 11–8, 11–8, 5–11, 11–6ರಿಂದ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.