ನೆಟ್‌ಬಾಲ್‌: ಸೆಮಿಗೆ ಕರ್ನಾಟಕ ತಂಡಗಳು ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡದವರು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಬ್‌ ಜೂನಿಯರ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಬಾಲಕರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 17–14ರಲ್ಲಿ ದೆಹಲಿ ತಂಡವನ್ನು ಸೋಲಿಸಿತು. ಇದಕ್ಕೂ ಮೊದಲು ನಡೆದಿದ್ದ ಪಂದ್ಯಗಳಲ್ಲಿ ಕರ್ನಾಟಕ 16–8ರಲ್ಲಿ ಮಧ್ಯಪ್ರದೇಶ ಎದುರೂ, 15–7ರಲ್ಲಿ ಸಿಕ್ಕಿಂ ಮೇಲೂ, 28–10ರಲ್ಲಿ ಬಿಹಾರ ವಿರುದ್ಧವೂ ಗೆದ್ದಿತ್ತು. ಬಾಲಕಿಯರ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕ 17–12ರಲ್ಲಿ ಛತ್ತೀಸಗಡ ತಂಡವನ್ನು ಪರಾಭವಗೊಳಿಸಿತು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯಗಳಲ್ಲಿ ಕರ್ನಾಟಕ 21–6ರಲ್ಲಿ ಚಂಡೀಗಡ ಎದುರೂ, 18–6ರಲ್ಲಿ ಒಡಿಶಾ ಮೇಲೂ, 17–14ರಲ್ಲಿ ಕೇರಳ ವಿರುದ್ಧವೂ ವಿಜಯಿಯಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.