ಸ್ನೂಕರ್‌: ವಿದ್ಯಾ ಪಿಳ್ಳೈಗೆ ಪ್ರಶಸ್ತಿ ಬೆಂಗಳೂರು: ಅಪೂರ್ವ ಆಟ ಆಡಿದ ವಿದ್ಯಾ ಪಿಳ್ಳೈ, ಇಂಡಿಯನ್‌ ಆಯಿಲ್‌ ಸರ್ವೊ ರಾಜ್ಯ ರ‍್ಯಾಂಕಿಂಗ್‌ ಸ್ನೂಕರ್‌ ಮತ್ತು ಬಿಲಿಯರ್ಡ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಗುರುವಾರ ನಡೆದ ಸ್ನೂಕರ್‌ ವಿಭಾಗದ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ವಿದ್ಯಾ 3–0ರಲ್ಲಿ ವರ್ಷಾ ಸಂಜೀವ್‌ ಅವರನ್ನು ಪರಾಭವಗೊಳಿಸಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಪಿ.ಕೀರ್ತನಾ 2–1ರಲ್ಲಿ ಚಿತ್ರಾ ಮಗಿಮೈರಾಜ್‌ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.